ಖ್ಯಾತ ಸಾಹಿತಿ ಸಾದತ್ ಹಸನ್ ಮಾಂಟೊ ಅವರು ದೇಶದ ವಿಭಜನೆಯ ಸಂಧರ್ಭದಲ್ಲಿ ಜರ್ಜರಿತನಾದ ಮನುಷ್ಯ ಎದುರಿಸಿದ ಮಾನಸಿಕ ಸಮಸ್ಯಗಳನ್ನು ವಿವರಿಸುವ ಕಥೆಗಳ ಕನ್ನಡ ಅನುವಾದ. 'ಸದ್ಯಕ್ಕಿದು ಹುಚ್ಚರ ಸಂತಿ’ ಕೃತಿಯಲ್ಲಿ 196 ಕಥೆಗಳಿದ್ದು, ಪಾಕಿಸ್ತಾನದ ವಿಭಜನೆಯಾಗಿ ಆರು ದಶಕಗಳು ಸಂದಿದ್ದರೂ ಆ ದಿನಗಳಲ್ಲಿ ನಡೆದ ಮನ ಕಲಕಿದ ಘಟನೆಗಳ ಭಾವ ತೀವ್ರತೆ ಇನ್ನೂ ಆರದೆ. ಮತಾಂಧತೆಯ ಮಾನವಿಯತೆಗೆ ಹೇತುವಾದ ಘಟನೆಯನ್ನು ಇಲ್ಲಿ ವಿವರಿಸಲಾಗಿದೆ. ಸೌಹಾರ್ದಯುತವಾದ ವಾತಾವರಣವನ್ನು ಕಲುಷಿತಗೊಳಿಸಿ ಮಾನವೀಯ ಸಂಬಂಧಗಳನ್ನು ರಾಜಕಾರಣ ಮತ್ತು ಮತಧರ್ಮಗಳು ಭಗ್ನಗೊಳಿಸುವ ಬಗೆಯನ್ನು ಮಾಂಟೋ ಕತೆಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ವಿವರಿಸುತ್ತದೆ.
©2024 Book Brahma Private Limited.