ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು.
ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ.
ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ಪ್ರೀತಂ ಅವರ ಆತ್ಮಕತೆ ಹಾಗೂ ಅಸ್ಗರ್ ಎಂಜಿನಿಯರ್ ಅವರ ವೈಚಾರಿಕ ಬರೆಹಗಳನ್ನು ಅನುವಾದಿಸಿದ್ದಾರೆ. ಉರ್ದುವಿನ ಕ್ರಾಂತಿಕಾರಿ ಕವಿ ಸಾಹಿರ್ ಲುಧಿಯಾನ್ವಿ ಅವರ ಕವನ ಮತ್ತು ಕಾವ್ಯ ಕುರಿತ ’ಪ್ರೇಮ ಲೋಕದ ಮಾಯಾವಿ' ಇವರ ವಿಶಿಷ್ಟ ಕೃತಿ.
ಇಪ್ಪತ್ತಕ್ಕೂ ಹೆಚ್ಚು ಕೃತಿ ರಚಿಸಿರುವ ಇವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ.