ಸದಾ ಪ್ರವಹಿಸುವ ಕಥೆಗಳು

Author : ಗಿರೀಶ ಜಕಾಪುರೆ

Pages 208

₹ 240.00




Year of Publication: 2019
Published by: ಸೃಷ್ಟಿ ಪಬ್ಲಿಕೇಷನ್ಸ್
Address: 121, 13 ನೇ ಮೇನ್, ವಿಜಯನಗರ, ಬೆಂಗಳೂರು-40
Phone: 9845096668

Synopsys

ಮಹಾರಾಷ್ಟ್ರ ಚಳವಳಿಗಳ ನಾಡು. ಇಲ್ಲಿ ಸದಾಕಾಲ ಒಂದಲ್ಲ ಒಂದು ರೀತಿಯ ಪ್ರಗತಿಪರ ಹೋರಾಟಗಳು ನಡೆದೇ ಇರುತ್ತವೆ. ಸಂತ ಪರಂಪರೆಯಿಂದ ಪ್ರಾರಂಭವಾದ ಸಮಾನತೆಯ ಚಳವಳಿ ದೇಶದ ತುಂಬೆಲ್ಲ ಪಸರಿಸಿ ಶಾಹೂ, ಫುಲೆ, ಅಂಬೇಡ್ಕರ್‌ರ ಮೂಲಕ ದಮನಿತರ ದನಿಯಾಯಿತು. ಅಂತೆಯೇ ದಲಿತ, ರೈತ, ಕಾರ್ಮಿಕ ಹೀಗೆ ಹಲವಾರು ಬಂಡಾಯಗಳನ್ನು ಈ ನೆಲ ಬಲು ಸಮೀಪದಿಂದ ಕಂಡಿದೆ. ಹೀಗಾಗಿ ಇಲ್ಲಿನ ಸಾಹಿತ್ಯದಲ್ಲಿಯೂ ಈ ಎಲ್ಲ ಚಳವಳಿಗಳು, ಹೋರಾಟಗಳು ಹಾಗೂ ಸಂಘರ್ಷಗಳು ಹಾಸುಹೊಕ್ಕಾಗಿವೆ. ಇಲ್ಲಿನ ಸಾಹಿತ್ಯ ಆಯಾ ಕಾಲಘಟ್ಟದ ಸಂವೇದನೆಗಳನ್ನು ತನ್ನ ಒಡಲಿನಲ್ಲಿ ಕಥೆ, ಕಾದಂಬರಿ, ನಾಟಕಗಳ ರೂಪದಲ್ಲಿ ದಾಖಲಿಸಿಕೊಂಡಿದೆ. ಮರಾಠಿ ರಂಗಭೂಮಿ ವಿಶಿಷ್ಟ ಮಹತಿಯನ್ನು ಪಡೆದಿರುವಂತೆಯೇ ಮರಾಠಿ ಕಥಾಸಾಹಿತ್ಯವೂ ಗದ್ಯಬರಹದಲ್ಲಿ ತನ್ನ ಛಾಪು ಮೂಡಿಸಿದೆ. ಇಂದು ಮರಾಠಿ ಕಥಾಸಾಹಿತ್ಯದಲ್ಲಿಯೂ ಹಲವಾರು ಪ್ರಯೋಗಗಳು ನಡೆಯುತ್ತಿವೆ. ಇಲ್ಲಿನ ಕಥಾಪ್ರಯೋಗಳಿಂದ ಬಹಳ ಚರ್ಚೆಗೊಳಪಟ್ಟ ಮಹತ್ವದ ಕಥೆಗಳನ್ನು ಇವು ಸದಾಕಾಲವೂ ಮಾದರಿಯಾಗಿ ನಿಲ್ಲಬಲ್ಲ ಕಥನಶಿಲ್ಪಗಳೆಂದು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಮರಾಠಿಯ ಪ್ರಖ್ಯಾತ ಬರಹಗಾರರಾದ ರವೀಂದ್ರ ಶೋಭಣೆ, ಮಾಧವಿ ಕುಂಟೆ, ಶರಣಕುಮಾರ ಲಿಂಬೋಳೆ, ಮಧುಮಂಗೇಶ ಕರಣ ಕ, ರೇಖಾ ಬೈಜಲ, ರಂಗನಾಥ ಪಠಾರೆ, ಲಕ್ಷ್ಮಣ ಗಾಯಕವಾಡ, ಮಂದಾಕಿನಿ ಭಾರಧ್ವಜ, ಲಕ್ಷ್ಮಣ ಮಾನೆ, ಜೋತ್ನಾ ದೇವಧರ ಅವರ ಕಥೆಗಳಿವೆ. ಗಿರೀಶ ಜಕಾಪುರೆ, ಅಕ್ಷತಾ ದೇಶಪಾಂಡೆ, ಅಶೋಕ ಥೋರಾತ, ದಿನೇಶ ಚವ್ಹಾಣ, ಸುಮಾ ದ್ವಾರಕಾನಾಥ, ಸುಜಾತಾ ಶಾಸ್ತ್ರೀ, ಶೀಲಾ ಅಂಕೋಲಾ, ಮೆಹಬೂಬ ಜಿಡ್ಡೆ, ಚಂದ್ರಕಾಂತ ಕಾರಕಲ ಹೀಗೆ ಅನುಭವಿ ಅನುವಾದಕರು ಈ ಕಥೆಗಳನ್ನು ಬಲುಅಂದವಾಗಿ, ಮೂಲಕ್ಕೆ ಧಕ್ಕೆಬರದಂತೆ ಅನುವಾದಿಸಿದ್ದಾರೆ.  

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books