ಎಸ್. ಆರ್ ರಾಮಸ್ವಾಮಿಯವರು ಅನುವಾದಿಸಿರುವ ‘ರಾಜತರಂಗಿಣಿ ಕಥಾವಳಿ’ ಕೃತಿಯು ಕಸ್ತೂರಿ ಮುರಳೀಕೃಷ್ಣ ಕಶ್ಮೀರ ಅವರ ರಾಜತರಂಗಿಣಿ ಎಂಬ ಕೃತಿಯನ್ನಾಧರಿಸಿದೆ. ಕಲ್ಹಣ ಕವಿಯ ರಾಜತರಂಗಿಣಿ ಭಾರತದಲ್ಲಿ ಬರೆಯಲ್ಪಟ್ಟ ಅಪೂರ್ವ ಇತಿಹಾಸ-ಸಾಹಿತ್ಯವಾಗಿದೆ. ಕಾಶ್ಮೀರವನ್ನಾಳಿದ ರಾಜರ ವಂಶಾನುಚರಿತವನ್ನು ಮತ್ತು ಆ ಮೂಲಕ ಸಾಮಾಜಿಕ ಇತಿಹಾಸವನ್ನು ದಾಖಲಿಸುವ ಒಂದು ಮಹತ್ವದ ಕೃತಿಯಾಗಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆಯನ್ನು ಕಸ್ತೂರಿ ಮುರಳೀಕೃಷ್ಣ ಸಿದ್ದಪಡಿಸಿದ್ದಾರೆ. ಈ ಇತಿಹಾಸ ಕಥನ ಭಾರತದ ಸಾಂಸ್ಕೃತಿಕ ಪೂರ್ವತಿಹಾಸವೂ ಹೌದು. ಕಾಶ್ಮೀರದಲ್ಲಿ ಹಾಗೂ ಜಗತ್ತಿನಲ್ಲಿ ನಡೆಯುತ್ತಿರುವಂತಹ ಕೆಲವೊಂದು ವಿದ್ಯಾಮಾನಗಳನ್ನು ಇಲ್ಲಿ ಲೇಖಕರು ದಾಖಲಿಸಿದ್ದಾರೆ. ಇಲ್ಲಿರುವ ಹದಿನೈದು ಕಥಾನಕಗಳು ಹೀಗಿವೆ; ಕಾಶ್ಮೀರವೆಂಬ ಪಾರ್ವತಿ, ದಾಮೋದರ ಸರ್ಪ, ಧಮಧರಕ್ಷಣೆ, ಗುರುದಕ್ಷಿಣೆ, ಜಲೌಕ ಧರ್ಮರಾಜನ ಅದ್ಭುತ ಜೀವನ, ಪ್ರಜಾಪುಣ್ಯದಿಂದ ರಾಜಶ್ರೇಷ್ಠರು, ಕಿನ್ನರನ ಕೋರಿಕೆ, ಅಜಿತ ಸಿಂಹನ ಆತ್ಮಾರ್ಪಣೆ, ಸಂಧಿಮತಿಯ ಆದರ್ಶ ಜೀವನ, ಧರ್ಮದಂಡ, ಸಂಭವಾಮಿ ಯುಗೇ ಯುಗೇ, ರಾಣಿ ಸುಗಂಧಾ ದೇವಿ, ಕಾಶ್ಮೀರಾ ರಾನಿ ಡಿದ್ದಾ ದೇವಿ, ತುರುಷ್ಕ ಹರ್ಷನ ಚರಿತ್ರೆ, ತಲೆಮಾರುಗಳ ತರಂಗಗಳು.
©2024 Book Brahma Private Limited.