ಪ್ರಪಂಚದ ಬಾಲ್ಯದಲ್ಲಿ

Author : ಕೆ.ಎಸ್. ನರಸಿಂಹಸ್ವಾಮಿ

Pages 112

₹ 22.00




Year of Publication: 1997
Published by: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ
Address: ಎ-5, ಗ್ರೀನ್ ಪಾರ್ಕ್, ನವದೆಹಲಿ-110016

Synopsys

ಭಾರತದ ಗುಡ್ಡಗಾಡು ಪ್ರದೇಶಗಳಿಂದ ಆಯ್ದ ಜಾನಪದ ಕಥೆಗಳನ್ನು ವೆರಿಯರ್ ಎಲ್ವಿನ್ ಬರೆದ ಕೃತಿ ಇದು. ಕವಿ. ಕೆ.ಎಸ್. ನರಸಿಂಹಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಬುಡಕಟ್ಟು ಸಮೂದಾಯಗಳಲ್ಲಿ ವೈವಿಧ್ಯಮಯವಾದ ಕಥೆಗಳಿವೆ. ನದಿ ಹುಟ್ಟಿದ್ದು ಹೇಗೆ? ಭೂಕಂಪಗಳಾಗುವುದು ಹೇಗೆ? ಜಗತ್ತು ನಿರ್ಮಾಣವಾದದ್ದು ಹೇಗೆ? ಇಂತಹ ವಿಷಯಗಳೇ ಇಲ್ಲಿಯ ಕಥೆಗಳು. ಆದರೆ, ಅವು ಬುಡಕಟ್ಟು ಜನಾಂಗೀಯ ದೃಷ್ಟಿಕೋನಗಳೇ ಆಗಿವೆ. ಆದರೆ, ಕುತೂಹಲ ಹುಟ್ಟಿಸುತ್ತವೆ. ವೈಜ್ಞಾನಿಕವಾದ ಮತ್ತು ಒಂದೇ ಒಂದು ಒಣ-ಒಣ ವಿಷಯದ ತರ ಅಲ್ಲ; ವಿಷಯ ವೈವಿಧ್ಯತೆ ಇದೆ. ಬುಡಕಟ್ಟು ಜನಾಂಗವನ್ನು ಎಲ್ವಿನ್ ಅರ್ಥ ಮಾಡಿಕೊಂಡ ರೀತಿ ಹಾಗೂ ಅವುಗಳನ್ನು ಕಥೆಯಾಗಿ ಪರಿವರ್ತಿಸಿಕೊಂಡ ಬಗೆ ಅಚ್ಚರಿ ಮೂಡಿಸುತ್ತದೆ. ಇಂತಹ ಅಚ್ಚರಿಯ ಭಾಗವಾಗಿ ಇಲ್ಲಿಯ  ಕಥೆಗಳಿವೆ.

About the Author

ಕೆ.ಎಸ್. ನರಸಿಂಹಸ್ವಾಮಿ
(26 January 1915 - 28 December 2003)

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ...

READ MORE

Related Books