‘ಪ್ರಿಮ್ರೋಸ್ ಮೇಲಿನ ಶಾಪ’ ದಿಟ್ಟ ಹುಡುಗಿಯೊಬ್ಬಳ ದಂತ ಕಥೆ ಅನುವಾದಿತ ಕತಾಸಂಕಲನ. ಈ ಕೃತಿಯನ್ನು ಯುವ ಬರಹಗಾರ್ತಿ ಚಂದನ ವೆಂಕಟೇಶ್ ಅವರು ಕನ್ನಡೀಕರಿಸಿದ್ದಾರೆ. ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿಯ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದು.
ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾಳನ್ನು ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಮಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ ಎನ್ನುವ ಕುತೂಹಲದೊಂದಿಗೆ ಕತೆ ಸಾಗುತ್ತದೆ. ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳು ಗುಂಪು ಮತ್ತು ಮುಗ್ಧ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ಅವರನ್ನು ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳ ಉತ್ತರವಾಗಿ ಈ ಪುಸ್ತಕವಿದೆ.
‘ಪ್ರಿಮ್ರೋಸ್ ಮೇಲಿನ ಶಾಪ’ ಪುಸ್ತಕದ ಕುರಿತು ಅನುವಾದಕಿ ಚಂದನಾ ವೆಂಕಟೇಶ್ ಅವರ ಮಾತು
©2024 Book Brahma Private Limited.