‘ಪಾಶ್ಚಾತ್ಯ ಕಥೆಗಳು’ ಲೇಖಕ ಉದಯಕುಮಾರ ಹಬ್ಬು ಅವರು ಅನುವಾದಿಸಿರುವ ಪಾಶ್ಚಾತ್ಯ ಕಥೆಗಳ ಸಂಕಲನ. ಪಾಶ್ಚಾತ್ಯ ಕಥೆಗಳು ಅನುವಾದ ಕನ್ನಡ ಸಾಹಿತ್ಯ ಪರಂಪರೆಗೆ ಹೊಸತಲ್ಲ. ಎ.ಎನ್. ಮೂರ್ತಿರಾವ್. ನಿರಂಜನ ಮುಂತಾದವರು ಪಾಶ್ಚಾತ್ಯ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪಾಶ್ಚಾತ್ಯ ಕಥೆಗಳ ಅನುವಾದ ಪರಂಪರೆಯನ್ನು ಲೇಖಕ ಉದಯಕುಮಾರ ಹಬ್ಬು ಅವರು ಮುಂದುವರೆಸಿದ್ದಾರೆ. ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸುವುದು ಅಷ್ಟು ಸುಲಭದ ಮಾತಲ್ಲ. ಇಂಗ್ಲಿಷ್ ವಾಕ್ಯ ಸರಣಿಯೂ ಕೆಲವೊಮ್ಮೆ ಕಾಂಪ್ಲೆಕ್ಸ್ ವಾಕ್ಯಗಳು ಮತ್ತು ಕಾಂಪೌಂಡ್ ವಾಕ್ಯಗಳಿದ್ದು, ಒಂದು ವಾಕ್ಯವನ್ನು ಕನ್ನಡಕ್ಕೆ ಅನುವಾದಿಸುವಾಗ ಎರಡು ಸರಳ ವಾಕ್ಯಗಳನ್ನಾಗಿ ವಿಭಜಿಸಿಕೊಳ್ಳಬೇಕಾಗುತ್ತದೆ. ಮತ್ತು ಇಂಗ್ಲಿಷ್ ಶಬ್ದಗಳು ಅನೇಕ ಅರ್ಥಗಳನ್ನು ಹೊಂದಿದ್ದು ಕಥಾ ಸಂದರ್ಭಕ್ಕೆ ಸರಿ ಹೊಂದುವ ಕನ್ನಡ ಶಬ್ದಗಳನ್ನು ಬಳಸಬೇಕಾಗುತ್ತದೆ. ಮತ್ತು ಕಥೆಯ ಲಯ ಮತ್ತು ಧ್ವನಿಯನ್ನು ಕೂಡ ಗ್ರಹಿಸಿ ಕನ್ನಡೀಕರಣ ಮಾಡಬೇಕಾಗುತ್ತದೆ. ಅನುವಾದಗಳು ಯಾಕೆ? ನಾವು ಜಾಗತೀಕರಣವನ್ನು ಎದುರಿಸುತ್ತಿದ್ದೇವೆ. ಜಗತ್ತಿನ ಇತರ ದೇಶಗಳಲ್ಲಿ ಕಥಾನಕವು, ಕಥಾನಿರೂಪಣೆಯು ಕಥಾ ತಂತ್ರಗಳು ಕಥಾ ವಿನ್ಯಾಸಗಳು ಹೇಗೆ ನಮಗಿಂತ ಭಿನ್ನವಾಗಿವೆ ಮತ್ತು ಸಾದೃಶ್ಯತೆಯನ್ನು ಹೊಂದಿವೆ ಇವನ್ನು ಸೃಜನಶೀಲ ಬರಹಗಾರರು ಮಾತ್ರವಲ್ಲ ಓದುಗರೂ ತಿಳಿದಿರಬೇಕಾಗುತ್ತದೆ ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಉದಯಕುಮಾರ ಹಬ್ಬು ಅವರು ಹೊಸತನ್ನು ಕೊಡುವ ದೃಷ್ಟಿಯಿಂದ ಹಲವಾರು ನೊಬೆಲ್ ಪ್ರಶಸ್ತಿ ವಿಜೇತರ ಅನನ್ಯ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.