ಪಾರಿಜಾತ

Author : ಗೀತಾ ಶೆಣೈ

Pages 192

₹ 140.00




Year of Publication: 2016
Published by: ಸ್ನೇಹಾ ಪ್ರಿಂಟರ್ಸ್‌
Address: #16, 1ನೇ ಬಿ ಮುಖ್ಯರಸ್ತೆ, ಶ್ರೀ ರಾಘವೇಂದ್ರ ಮಠದ ರಸ್ತೆ, ಪಾಪರೆಡ್ಡಿಪಾಳ್ಯ, 11ನೇ ಬ್ಲಾಕ್‌, ನಾಗರಬಾವಿ 2ನೇ ಹಂತ, ಬೆಂಗಳೂರು.
Phone: 9845062549

Synopsys

ಮೀನಾ ಕಾಕೋಡಕಾರ ರಚಿಸಿರುವ ಕತೆಗಳ ಸಂಕಲನವನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವೆಯ ಗ್ರಾಮೀಣ ಪರಿಸರ, ಅಲ್ಲಿಯ ಸಮುದ್ರ ತೀರ, ಎಡಬಿಡದೆ ಸುರಿಯುವ ಮಳೆ ಹಾಗೂ ಬಡಜನರ ಬದುಕಿನ ಹೋರಾಟದ ಚಿತ್ರಣವಿದೆ. ಮಾನವ ಸಂಬಂಧದ ಅತಿ ಸೂಕ್ಷ್ಮ ಎಳೆಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ.

ಮನುಷ್ಯನ ಬದುಕಿನಲ್ಲಿ ಹುಟ್ಟಿಗಿಂತ ಸಾವು ಬೀರುವ ಪರಿಣಾಮ ಹೆಚ್ಚು ಗಹನವಾದುದು ಎಂಬುದನ್ನು ಇಲ್ಲಿಯ ಅನೇಕ ಕಡೆಗಳಲ್ಲಿ ಮೀನಾ ಕಾಕೋಡಕಾರ  ಎತ್ತಿ ತೋರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಘಟಿಸುವ ಮಹತ್ವಪೂರ್ಣ ಸಂಗತಿಗಳು, ಆ ವ್ಯಕ್ತಿಯ ಸಾವಿನೊಂದಿಗೆ ಇಲ್ಲವಾಗುವುದಾದರೆ, ಅಂತಿಮವಾಗಿ ಅವುಗಳಿಗೆ ಯಾವ ಅರ್ಥವೂ ಇಲ್ಲವೆಂದಾಗುವುದಿಲ್ಲವೇ ಎಂಬ ತಾತ್ವಕ ಪ್ರಶ್ನೆಯೊಂದಿಗೆ ಅವರು ಓದುಗರನ್ನು ಗಂಭೀರ ಚಿಂತನೆಗೆ ಒಳಪಡಿಸುತ್ತಾರೆ. ಇಂತಹ ಹಲವು ಕತೆಗಳು ಇಲ್ಲಿವೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books