ಒಂದು ಅರ್ಥಪೂರ್ಣ ಸತ್ಯ

Author : ಜೆ.ಎಸ್. ಕುಸುಮಗೀತ

Pages 124

₹ 113.00

Buy Now


Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 9900998686

Synopsys

ಲೇಖಕ ಹಿಮಾಂಶು ಜೋಶಿ ಅವರ ಹಿಂದಿ ಸಣ್ಣ ಕತೆಗಳನ್ನು ಕನ್ನಡಕ್ಕೆ ಅನುವಾದಕ ಲೇಖಕರಾದ ಡಾ ಜೆ ಎಸ್ ಕುಸುಮಗೀತ ಅವರು ತಂದಿದ್ದಾರೆ. 

ಖ್ಯಾತ ಹಿಂದಿ ಲೇಖಕ ಹಿಮಾಂಶು ಜೋಶಿ ಅವರ ಕಥಾ ಜಗತ್ತು ಅತ್ಯಂತ ವ್ಯಾಪಕವಾಗಿರುವಂತದ್ದು.  ವಿವಿಧ ಆಯಾಮಗಳನ್ನೊಳಗೊಂಡ ಇವರ ಕೃತಿಗಳಲ್ಲಿ ಜೀವನದ ವಿವಿಧ ಮಜಲುಗಳು ಸಹಜವಾಗಿ ಮೂಡಿ ಬಂದಿದೆ. ಇವರ ಸಜೀವ ಪಾತ್ರಗಳಲ್ಲಿ  ಪ್ರತಿಬಿಂಬಿತಗೊಂಡಿರುವ ಜಗತ್ತು ಓದುಗನಿಗೆ ತನ್ನ ಸುತ್ತಮುತ್ತಲಿನದೇ ಎನಿಸ ತೊಡಗುತ್ತದೆ. ಇಂದಿನ ಕಥಾಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗುರುತಿಸಿಕೊಂಡಿರುವ ಈ ಕತೆಗಳಲ್ಲಿ ಮುಂಬರುವ ನಾಳಿನ ಕತೆಗಳ ಸ್ವರೂಪದ ಹೊಳಹು ಕಾಣುತ್ತದೆ.
"ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ" ಮತ್ತು "ಸಾಗರ್ ತಟ್ ಕೇ ಶಹರ್" - ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಮೂಡಿಬಂದಿರುವ ಸುಂದರ ಚಿತ್ರಗಳು ಈ ಪುಸ್ತಕದಲ್ಲಿದೆ.  
 

About the Author

ಜೆ.ಎಸ್. ಕುಸುಮಗೀತ

ಲೇಖಕಿ, ಅನುವಾದಕಿ ಜೆ.ಎಸ್.ಕುಸುಮ ಗೀತ ಅವರು ಕನ್ನಡ  ಹಾಗೂ ಹಿಂದಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ರಾಮಚಂದ್ರ ಶುಕ್ಲ ಪ್ರಶಸ್ತಿ, ಸೌಹಾರ್ದ ಸಮ್ಮಾನ್, ವಿಶಿಷ್ಟ ಹಿಂದಿ ಸೇವೆ ಸಮ್ಮಾನ್, ವಿದ್ಯಾಸಾಗರ್ ಸಾರಸ್ವತ ಸಮ್ಮಾನ್, ಸಾಹಿತ್ಯ ಸೇವಾ ಸಮ್ಮಾನ್, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಪುಸ್ತಕ ಬಹುಮಾನ, ಸಾಹಿತ್ಯ ವಾಚಸ್ಪತಿ,  ಹಿಂದಿ ಶಿಖರ್ ಸಮ್ಮಾನ್, ಗಾರ್ಗಿ ಗುಪ್ತ ದ್ವಿವಾಗೀಶ್ ಮುಂತಾದ ಪ್ರಶಸ್ತಿಗಳು ಸಂದಿವೆ.  ಕೃತಿಗಳು: ಮಹಾತ್ಮಗಾಂಧಿ ನನ್ನ ತಾತ, ಭಾಗ-1, ಒಂದು ಅರ್ಥಪೂರ್ಣ ಸತ್ಯ, ಅಂತಿಮ ಜ್ವಾಲೆ (ಕಾದಂಬರಿ ಅನುವಾದ)   ...

READ MORE

Related Books