'ಓ ಹೆನ್ರಿ’ ಕಾವ್ಯನಾಮದಿಂದ ಬರೆಯುವ ಅಮೆರಿಕೆಯ ಪ್ರಸಿದ್ಧ ಲೇಖಕನ ಹೆಸರು.ವಿಲಿಯಂ ಸಿಡ್ನೆ ಪೋರ್ಟರ್ (1862-1910). ತನ್ನ ಸಣ್ಣಕತೆಗಳ ಮೂಲಕ ಪ್ರಸಿದ್ಧನಾದ ಲೇಖಕ ಓ ಹೆನ್ರಿ. ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿರುವ ಓ ಹೆನ್ರಿ ’ಬೆರಗು’ಗೊಳಿಸುವ ಅಂತ್ಯದ ಕತೆಗಳ ಮೂಲಕ ಗಮನ ಸೆಳೆದವ. ಹಣ ದುರುಪಯೋಗ ಮಾಡಿದ ಅಪರಾಧದ ಜೈಲು ಶಿಕ್ಷೆ ಅನುಭವಿಸುತ್ತಿರುವ ದಿನಗಳಲ್ಲಿ ಕತೆ ಬರೆಯಲು ಆರಂಭಿಸಿದ. ಅವನ ಕಥೆಗಳ ವಿಶೇಷ ಎಂದರೆ ಅವುಗಳ ಆಶ್ಚರ್ಯಕರ ಅಂತ್ಯ. ಅವನ ಕತೆಗಳಲ್ಲಿ ಬರುವ ಅನಿರೀಕ್ಷಿತ ಬದಲಾವಣೆಗಳು, ಕುತೂಹಲ ಉಳಿಸಿ ಬೆಳೆಸುತ್ತವೆ. ಮತ್ತು ಕೊನೆಯವರೆಗೂ ಉಳಿಸಿಕೊಳ್ಳುತ್ತವೆ.
ಓ-ಹೆನ್ರಿಯ ಕಥೆಗಳು ಅಮೆರಿಕದ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಬಯಕೆ, ಆಸೆ, ಹತಾಶೆ, ಸಂಭ್ರಮ, ಸಂಕಟಗಳನ್ನು ಚಿತ್ರಿಸುತ್ತವೆ. ಪ್ರತಿ ಕತೆಯೂ ಮನುಷ್ಯ ಸ್ವಭಾವದ ಒಳನೋಟ ನೀಡುತ್ತದೆ. ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳಾಗಿರುವ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ದಾಖಲಿಸುತ್ತದೆ. ಈ ಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಗಳಿವೆ.
©2024 Book Brahma Private Limited.