ಇಪ್ಪತ್ತನೆಯ ಶತಮಾನದ ಆರಂಭದ ದಿನಗಳ ಅಮೆರಿಕದ ಕಥಾಸಾಹಿತ್ಯದಲ್ಲಿ ಪ್ರಮುಖ ಹೆಸರು ಓ ಹೆನ್ರಿ. 1906-1910ರ ನಾಲ್ಕು ವರ್ಷಗಳ ಅವಧಿಯಲ್ಲಿ ಇನ್ನೂರ ಎಪ್ಪತ್ತಕ್ಕೂ ಹೆಚ್ಚು ಕತೆಗಳನ್ನ ಬರೆದ ಓ ಹೆನ್ರಿ ಅಮೆರಿಕದ ಸಣ್ಣಕಥೆಯ ಮಹಾನ್ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ಜನಪ್ರಿಯ ಕಥೆಗಾರ. ಸಮಕಾಲೀನ ಲೇಖಕರು ಓ ಹೆನ್ರಿಯನ್ನು ’ಅಮೆರಿಕಾದ ಡಿಕನ್ಸ್, ಮೋಪಾಸಾ ಅಥವಾ ಕಿಪ್ಲಿಂಗ್’ ಎಂದು ವರ್ಣಿಸಿದ್ದರು. ಆಧುನಿಕ ವಿಮರ್ಶಕರ ದೃಷ್ಟಿಯಲ್ಲಿ ಈ ಹೋಲಿಕೆ ಅತಿಶಯವಾಗಿ ಕಂಡರೂ ದಕ್ಷಿಣ ಅಮೆರಿಕದ ಜನಜೀವನದ ಸೊಗಡಿನಿಂದಾಗಿ ಹಾಗೂ ಪಾತ್ರ ಚಿತ್ರಣದ ಸಹಜತೆಯಿಂದಾಗಿ ಜನಾದರಣೆಯನ್ನು ಉಳಿಸಿಕೊಂಡಿವೆ.
©2024 Book Brahma Private Limited.