ನವಿಲು ಪುರಾಣ

Author : ಕೆ.ಈ. ರಾಧಾಕೃಷ್ಣ

Pages 420

₹ 405.00




Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: # 121, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560040

Synopsys

ನವಿಲು ಪುರಾಣ- ಇನ್ತಿಜಾರ್ ಹುಸೇನ್ ಅವರ ಆಂಗ್ಲ ಕೃತಿ ‘ದಿ ಕ್ರಾನಿಕಲ್ ಆಫ್ ದಿ ಪಿಕಾಕ್ಸ್’ ಅನ್ನು ಪ್ರೊ. ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ ಕಥೆಗಳ ಸಂಕಲನ. ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾದ ಸಂದರ್ಭದಲ್ಲಿ ಹುಟ್ಟಿದ ಮತ್ತು ಆ ವಿಭಜನೆಯ ಕಥೆಗಳನ್ನು ಆಧರಿಸಿದ ವಿಷಯ ವಸ್ತುವುಳ್ಳ ಕಥೆಗಳು ಒಳಗೊಂಡಿವೆ. ಆ ಪೈಕಿ ನವಿಲು ಪುರಾಣ ಎಂಬದೊಂದು ಕಥೆಯೂ ಇದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಥೆಗಳೂ ಓದುಗರ ಗಮನ ಸೆಳೆಯುತ್ತವೆ.

About the Author

ಕೆ.ಈ. ರಾಧಾಕೃಷ್ಣ
(22 December 1946)

ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ...

READ MORE

Related Books