ಮಿ.ಜೆ.ನಿ. ಅವರ ಸಣ್ಣ ಕಥೆಗಳು

Author : ಎಂ. ನಂಜುಂಡಸ್ವಾಮಿ

Pages 104

₹ 50.00




Year of Publication: 2007
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಮಿಲ್ಲೊಶ್ ಜಿರ್ಜ್ ನಿಕೊಲ್ಲಾ, 26 ವರ್ಷದ ಬದುಕಿನಲ್ಲಿ ಅವರ ಸಾಹಿತ್ಯಕ್ಕೆ ಸಿಕ್ಕಿದ್ದು ನಿಷೇಧದ ಉಡುಗೊರೆ. ಆದರೆ ಇಂದು ಆಲ್ಬೇನಿಯಾದ ಹೆಮ್ಮೆಯ ಸಾಹಿತಿ. ಸುಂದರ ಸಂಸಾರದ ಆಸೆಗಾಗಿ ದುಡಿಯಲು ವೇಶ್ಯಾ ವೃತ್ತಿಯನ್ನು ಆರಿಸಿಕೊಂಡು, ಅಲ್ಲಿ ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಗಿ ಕೊನೆಗೆ ಹುಚ್ಚಾಸ್ಪತ್ರೆಯನ್ನು ಸೇರಿದರು. ಗುರುವಿಗಾಗಿ ಕೊಡಲು ಏನೂ ಇಲ್ಲದೆ ತನ್ನ ಹರಿದ ಪಾದರಕ್ಷೆಯನ್ನು ಅವರಿಗೆ ನೀಡುವ ಬಾಲಕ ಲುಲಿ, ಅಸಹನೀಯವಾದ ವಾತಾವರಣದಲ್ಲಿ ಖಿನ್ನವಾಗಿ ಅಸಹಾಯಕವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ಗುಬ್ಬಿ, ಮರ್ಯಾದಾ ಹತ್ಯೆಯು ಪ್ರಚಲಿತವಾಗಿದ್ದ ಆಲ್ಬೇನಿಯಾದಲ್ಲಿ ತಾನು ಗಂಡನಿಂದ ವಂಚಿತವಾದ ಸುಖವನ್ನು ಕೆಲಸದ ಆಳಿನಿಂದ ಪಡೆದೂ, ಮರ್ಯಾದಾ ಹತ್ಯೆಯಿಂದ ಪಾರಾದ ಹೆಣ್ಣು ಇಂತಹ ಹಲವು ಸಂಗತಿಗಳನ್ನು ಲೇಖಕರು ಈ ಕೃತಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

About the Author

ಎಂ. ನಂಜುಂಡಸ್ವಾಮಿ
(28 March 1970)

ಎಂ. ನಂಜುಂಡಸ್ವಾಮಿಯವರು ದಿನಾಂಕ 28 ಮಾರ್ಚ್ 1970 ರಂದು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಜನಿಸಿದರು. ತಾಯಿ ಸರೋಜಮ್ಮ , ತಂದೆ ಮಹಾದೇವಯ್ಯ. ಮಳವಳ್ಳಿಯಲ್ಲಿ 1ನೇ ತರಗತಿ ನಂತರ  ಅವಿಭಜಿತ ಧಾರವಾಡ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ, .ಶಿರಹಟ್ಟಿಯಲ್ಲಿ 9ನೇ ತರಗತಿವರೆಗೆ 1985ರಲ್ಲಿ ಮುಂಡರಗಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದಿದರು. ಧಾರವಾಡದಲ್ಲಿ 1988 ರಲ್ಲಿ ಪಿಯೂಸಿ ಪಾಸಾದರು. ಕರ್ನಾಟಕ ರೀಜನಲ್ ಇಂಜನಿಯರಿಂಗ್ ಕಾಲೇಜ್, ಸೂರತಕಲ್ ಗೆ ಸೇರಿದರು. ಅಲ್ಲಿ 1993ರಲ್ಲಿ ಗಣಿ ತಂತ್ರಜ್ಞಾನದಲ್ಲಿ ಬ್ಯಾಚಲರ್ ಆಫ್ ಟೆಕ್ನೋಲಾಜಿ ಪದವೀಧರರು. ಗೋವಾ ರಾಜ್ಯದ ಡೆಂಪೋ ಮೈನಿಂಗ್ ಕಾರ್ಪೋರೇಷನ್ ...

READ MORE

Related Books