ವಿಡಂಬನೆಗಳ ಮೂಲಕವೇ ಜಗತ್ತನ್ನು ನೋಡುವ ಮುಲ್ಲಾ ನಸ್ರುದ್ದೀನ್ ಊರು ಈಗಿನ ಟರ್ಕಿಯಲ್ಲಿದೆ. ಹಾಗೆ ವಿಡಂಬನೆಗೆ ಮಾಡಲು ಅವನಿಗೆ ಸಾಧನವಾಗಿ ಒದಗಿಬರುವುದು ಅಧ್ಯಾತ್ಮ/ ಸೂಫಿತನ. ತಮಾಷೆಯ ಕತೆಗಳಂತೆ ನಕ್ಕುನಗಿಸುತ್ತಲೇ ಮನುಷ್ಯನ ಸಣ್ಣತನಗಳನ್ನು ಬೆತ್ತಲು ಮಾಡುವ ನಸ್ರುದ್ದೀನ್ ದಡ್ಡನಂತೆ ಕಾಣಿಸಿಕೊಳ್ಳುವ ಜಾಣ, ನಿರೀಶ್ವರವಾದಿಯಂತೆ ತೋರುವ ಅನುಭಾವಿ.
ಈತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ.
©2024 Book Brahma Private Limited.