ಉರ್ದು ಹಾಗೂ ಹಿಂದಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಡಾ. ಪಂಚಾಕ್ಷರಿ ಹಿರೇಮಠ ಅನುವಾದಿಸಿದ್ದಾರೆ. ಸುಮಾರು 50 ವರ್ಷ ಕಾಲ ಬರೆದು ಉರ್ದು ಸಾಹಿತ್ಯ ವಲಯದಲ್ಲಿ ಕೃಷ್ಣಚಂದ ಅವರದು ತುಂಬಾ ಪ್ರಸಿದ್ಧ ಹೆಸರು. ಕಥೆ, ಕಾದಂಬರಿ, ನಾಟಕ, ಪ್ರವಾಸ ಸಾಹಿತ್ಯ, ವಿಡಂಬನೆ, ಹಾಸ್ಯ ಬರಹಗಳ ಮೂಲಕ ಉರ್ದು ಸಾಹಿತ್ಯವನ್ನು ಸಿರಿವಂತಗೊಳಿಸಿದವರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ, ಅಮಾನವೀಯ ಸಂಪ್ರದಾಯಗಳನ್ನು ಹಾಗೂ ವಿಲಾಸೀ ಜೀವನದ ಪೊಳ್ಳುತನವನ್ನು ಚಿತ್ರಿಸಿದ ಅವರ ಕಥೆಗಳು ಕಲ್ಪನೆಯ ರಮ್ಯಲೋಕದ ಸೊಗಸನ್ನು ಮತ್ತು ವಾಸ್ತವಿಕ ಲೋಕದ ಕಠೋರತೆಯನ್ನು ಸಮರಸಗೊಳಿಸುತ್ತವೆ. ಲೇಖಕ ಕೃಷ್ಣಚಂದರ ಪ್ರಸಿದ್ಧ 8 ಕಥೆಗಳನ್ನು ಪಂಚಾಕ್ಷರಿ ಹಿರೇಮಠರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕೃತಿಯು ಉರ್ದು ಸಾಹಿತ್ಯ ಕೃಷ್ಣಚಂದರ, ಮಹಾಲಕ್ಷ್ಮೀಯ ಸೇತುವೆ, ಆತ ಮತ್ತೆ ಬಂದಾಗ, ಗುಲಾಬಿಯ ಬೇಗಂ, ಒಂದು ಪತ್ರ, ಒಂದು ಪರಿಮಳ, ಮೊಹೆಮಜೋದಾರೋದ ಭಂಡಾರ, ಅಮೃತಸರ, ಕತ್ತಲು-ಬೆಳಕು, ಕೈಟ್ ಅಧ್ಯಾಯಗಳನ್ನು ಒಳಗೊಂಡಿದೆ.
©2024 Book Brahma Private Limited.