'ಕೇರಳ ಕಾಂತಾಸಮ್ಮಿತ' ಕೃತಿಯು ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ. ಯಾವುದೇ ಸಂಸ್ಕೃತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು ಅರಿಯಲು ಬಯಸುವವರು ಆಯಾ ಸಂಸ್ಕೃತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಯ ಮೊರೆ ಹೋಗಲೇ ಬೇಕಾಗುತ್ತದೆ. ಅದಕ್ಕೆ ಕಾರಣ ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ವಾರಸುದಾರರು-ಸಂರಕ್ಷರಾಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಆ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲನಗಳ ಅರಿಯಬಹುದು. ಕಮಲಾ ಹೆಮ್ಮಿಗೆಯವರು ’ಕೇರಳ ಕಾಂತಾಸಮ್ಮಿತ’ ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಹದಿನೈದು ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಮಲೆಯಾಳೀ ಸಂಸ್ಕೃತಿಯಲ್ಲಿನ `ಸ್ತ್ರೀ ಸಂವೇದನೆ ಪರಿಚಯಿಸಿದ್ದಾರೆ.
©2024 Book Brahma Private Limited.