ಕಮ್ಯೂನಿಸಂ, ಸಮಾಜವಾದ ತತ್ವ-ಸಿದ್ಧಾಂತಗಳ ಸುತ್ತ ಹೆಣೆದ ಕತೆಗಳ ಸಂಕಲನ. ಕೆಂಪು ಬಣ್ಣವು ಕ್ರಾಂತಿ,ಸಮಾನತೆಗಳನ್ನು ಪ್ರತಿಪಾದಿಸುತ್ತ ಶ್ರಮಿಕ ವರ್ಗದ ಬದುಕಿನ ವಿವಿಧ ಆಯಾಮಗಳನ್ನು ಚಿತ್ರಿಸುತ್ತದೆ. ಜಾಗತೀಕರಣ ಬಂಡವಾಳಶಾಹಿಗಳ ಆಕ್ರಮಣಕಾರಿ ರೀತಿಗಳನ್ನು ತೆರೆದಿಡುವ ಮತ್ತು ಸಾಮಾನ್ಯ ಜನರ ಮಾನವೀಯತೆಯನ್ನು ಎತ್ತಿ ಹಿಡಿವ ನೀಳ್ಗತೆಗಳು ಅಸಂಗತ ಭ್ರಾಮಕ ನಿರೂಪಣಾ ತಂತ್ರಗಳೊಂದಿಗೆ ಗಮನೀಯವೆನಿಸಿವೆ. ಎಂ.ಸುಕುಮಾರನ್ ಬರೆದ ಮಲೆಯಾಳಂ ಕತಾ ಸಂಕಲನವನ್ನು ಅಶೋಕಕುಮಾರ್ ಅನುವಾದಿಸಿದ್ದಾರೆ.
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE