ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರನೋಟವನ್ನು ನೀಡಬಲ್ಲಂತಹ ಮತ್ತೊಂದು ಗ್ರಂಥ ಬಂದಿಲ್ಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೃತಿಯನ್ನು ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಸಂಪಾದಿಸಿದ್ದಾರೆ. ಇದನ್ನು ಆರ್. ಪಿ. ಹೆಗಡೆಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಮೂರನೆಯ ಸಂಪುಟವು, ಹತ್ತು ಮತ್ತು ಹನ್ನೊಂದನೆಯ ಖಂಡದಲ್ಲಿರುವ ವಿಶ್ವ ಕಥಾಲೋಕದ 25 ಕಥೆಗಳನ್ನೂ, ಹಾಗೂ ಪ್ರಾಚೀನ ಮತ್ತು ಆಧುನಿಕ ಕತೆಗಳ ಸಾಗರದಿಂದ ಆಯ್ದ 33 ಕಥೆಗಳನ್ನೂ ಕೊಡಲಾಗಿದೆ. ಇವುಗಳ ಜೊತೆಗೆ ಪರಿಶಿಷ್ಟವಾಗಿರುವ ಹನ್ನೆರಡನೆಯ ಖಂಡವು ವರ್ಣನಾತ್ಮಕ ಪ್ರವಾಸ ಕಥನಗಳನ್ನು ಈ ಸಂಪುಟವು ಒಳಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE