ಪ್ರಸಿದ್ಧ ಲೇಖಕ ರಾಬಿನ್ ಕುಕ್ ಅವರ ’ಫೀವರ್’ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಡಾ. ಅನಸೂಯದೇವಿ.
ವೈದ್ಯಕೀಯ ಜಗತ್ತಿನೊಳಗಿನ ಅಮಾನುಷ ಪ್ರವೃತ್ತಿಗಳ ವಿರುದ್ದ, ಜೀವ ವಿರೋಧಿ ಜೌದ್ಯೋಗಿಕರಣದ ವಿರುದ್ದ, ಪ್ರತಿ ಕ್ಷಣದಲ್ಲೂ ಹೊಂಚು ಹಾಕಿ ಕೂತಿರುವ ಸಾವಿನ ವಿರುದ್ದ ಹೋರಾಟಕ್ಕೆ ತೊಡಗಿರುವ ವೈದ್ಯಕೀಯ ಸಂಶೋಧಕನೊಬ್ಬನ ಸಂಘರ್ಷ, ಸಂಕಟ, ಸಂವೇದನೆಗಳ ಕಥನವಿದು.
ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನಸೂಯಾದೇವಿ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಇವರ ತಂದೆ ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ ಎಂ.ಎ. ಪದವಿ ಪಡೆದರು. ಬೋಧನಾ ವೃತ್ತಿ ಆಯ್ದುಕೊಂಡಿರುವ ಅನುಸೂಯದೇವಿ ಅವರು ಪ್ರಸ್ತುತ ಬೆಂಗಳೂರಿನ ಬಿ.ಎಚ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರು ವಿಭಾಗದ ಮುಖ್ಯಸ್ಥೆ ಕೂಡ. ಶಾಲಾ ಕಾಲೇಜು ದಿನಗಳಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ಅನುಸೂಯಾದೇವಿ ಅವರು ಬಾಲ ಕಲಾವಿದೆಯಾಗಿ ಆಕಾಶವಾಣಿಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ...
READ MORE