ಸ್ಪಾನಿಷ್ ಭಾಷೆಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು ಬರೆದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಲೇಖಕನ ಕೃತಿಯನ್ನು ಕನ್ನಡಕ್ಕೆ ಎಂ.ಎಸ್. ರಘುನಾಥ್ ಅವರು ತಂದಿದ್ದಾರೆ.
“ಕರ್ನಲ್’ಗೆ ಯಾರೂ ಬರೆಯುವುದಿಲ್ಲ” ಕೃತಿಯು ಸೇನೆಯಿಂದ ನಿವೃತ್ತಿ ಹೊಂದಿದ ಕರ್ನಲ್ ಒಬ್ಬನ ಕಥೆಯನ್ನು ಹೇಳುತ್ತದೆ. ಕರ್ನಲ್ ತನ್ನ ಪಿಂಚಣಿ ನಿರೀಕ್ಷೆಯಲ್ಲಿ ಅಂಚೆ ಕಚೇರಿಯಿಂದ ಬರುವ ಪತ್ರಕ್ಕಾಗಿ ಇಡೀ ಜೀವನ ನಿರೀಕ್ಷೆಯಲ್ಲಿಯೇ ಕಳೆಯುತ್ತಾನೆ. ಅವನಿಗೆ ತನ್ನ ಹೆಂಡತಿ ಮತ್ತು ಹತ್ಯೆಗೆ ಈಡಾಗಿ ಸತ್ತು ಹೋದ ಮಗ ಬಿಟ್ಟು ಹೋದ ಹುಂಜ ಇವೆರಡೇ ಸರ್ವಸ್ವವಾಗಿರುತ್ತದೆ. ಆತನ ಮುಂದೆ ಭರವಸೆಯ ನಾಳೆಗಳು ಮಾತ್ರ ಇವೆ ಎಂಬ ಆಶಯಭಾವ ಅವನನ್ನು ಕಾಡುತ್ತದೆ. ತನ್ನ ಕಡುಬಡತನದಿಂದ ಕೂಡಿದ ಬದುಕನ್ನು ಸವೆಸಲೇ ಬೇಕಾದ ಇಂದಿನ ದಿನಕ್ಕೆ ಯಾವುದೇ ಅರ್ಥ ಮತ್ತು ಅದಕ್ಕೊಂದು ಸಾರ್ಥಕತೆ ಆತನ ಜೀವನದಲ್ಲಿ ಇಲ್ಲವೆಂಬುದನ್ನು ಚಿತ್ರಿಸುತ್ತದೆ.
©2024 Book Brahma Private Limited.