ಕಣಜ

Author : ಪ್ರಮೋದ ಮುತಾಲಿಕ

Pages 200

₹ 180.00




Year of Publication: 2021
Published by: ಸೃಷ್ಟಿ ಪಬ್ಲಿಕೇಷನ್ಸ್
Address: #121, 13ನೇ ಮುಖ್ಯರಸ್ತೆ, ಎಂ.ಸಿ ಬಡಾವಣೆ, ವಿಜಯ ನಗರ, ಬೆಂಗಳೂರು.

Synopsys

ಪ್ರಮೋದ ಮುತಾಲಿಕ ಅವರ ‘ಕಣಜ’ ಕೃತಿಯೂ ಜಗತ್ತಿನ ಕೆಲ ಶ್ರೇಷ್ಠ ಕತೆಗಳ ಕನ್ನಡಾನುವಾದವಾಗಿದೆ. ಈ ಕತಾಸಂಕಲನವು 20 ಪರಿವಿಡಿಗಳನ್ನು ಹೊಂದಿದ್ದು ಶೀರ್ಷಿಕೆಯ ಹೆಸರುಗಳು ಹೀಗಿವೆ; ಕ್ಲೋಷೆ(ಮೊಪಾಸ), ಅದು ಕನಸೇ(ಮೊಪಾಸ), ಭೂತ(ಮೊಪಾಸ), ನಾನು ಹುಚ್ಚನೇ?(ಮೊಪಾಸ), ಹುಚ್ಚನೊಬ್ಬನ ದಿನಚರಿ(ಮೊಪಾಸ), ದೇವರಿಗೂ ಸತ್ಯ ಗೋಚರಿಸುವುದು(ಲಿಯೋ ಟಾಲ್ ಸ್ಟಾಯ್), ಅವಳ ಪ್ರಿಯಂಕರ(ಮ್ಯಾಕ್ಸಿಂ ಗಾರ್ಕಿ), ವಾಂಕಾ (ಆಂಟಿನ್ ಚೆಕಾಫ್), ಗುಮಾಸ್ತನೊಬ್ಬನ ಸಾವು (ಆಂಟಿನ್ ಚೆಕಾಫ್), ಕಪಟಿ (ಆಂಟಿನ್ ಚೆಕಾಫ್), ಉಸುರಿಲ್ಲದವಳು( ಆಂಟಿನ್ ಚೆಕಾಫ್), ಸಾವಿನ ನೆರಳು (ಸಾಮರಸೆಟ್ ಮಾಮ್), ರಷ್ಯನ್ ಯೋಧ( ಅಲೆಕ್ಸಿ ಟಾಲ್ ಸ್ಟಾಯ್), ಯುದ್ಧ(ಪಿರಾಂಡಲೊ), ಬದುಕಿನ ಕರೆ(ನಟ್ ಹ್ಯಾಮನ್), ಒಂದು ಆಕಸ್ಮಿಕದ ಸುತ್ತ ಮುತ್ತ(ನ್ಯಾಡಿನ್ ಗಾರ್ಡಿಮರ್) ಹುತಾತ್ಮ (ಜೇಮ್ಸ್ ಗೂಗಿ), ಬಲಿಯ ಮೊಟ್ಟೆ(ಚಿನುವ ಆಚಿಬೆ), ಮಣ್ಣಿಂದ ಮಣ್ಣಿಗೆ (ಇಸಬೆಲಾ ಅಯೆಂದೆ). 

9845096668

About the Author

ಪ್ರಮೋದ ಮುತಾಲಿಕ

ಲೇಖಕ, ಅನುವಾದಕ ಪ್ರಮೋದ ಮುತಾಲಿಕ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಬೆಂಗಳೂರಿನ  ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲೀಷಗೆ ಅನುವಾದಿಸಿದ್ದಾರೆ. ಚಿನುವ ಅಚಿಬೆ ಯ Things Fall Apart, ಆರ್. ಕೆ. ನಾರಾಯಣರ The Guide, ಸ್ಕಾಟ್ ಫಿಜರಾಲ್ಡ್ ರ Great Gatsby ಕಾದಂಬರಿಗಳನ್ನು ಕನ್ನಡಕ್ಕೆ ...

READ MORE

Reviews

ಹೊಸತು-2004- ನವೆಂಬರ್‌

“ಲೋಕಸಾಹಿತ್ಯೋದ್ಯಾನದ ಸವಿಜೇನು'' ಎಂಬ ಅರ್ಥಪೂರ್ಣ ಫಲಕವೊಂದು ಹಿಂದೆ ನವಕರ್ನಾಟಕ ಪ್ರಕಾಶನದ ವಿಶ್ವಕಥಾಕೋಶದ ಬಿಡುಗಡೆಯ ಎಲ್ಲ ಸಮಾರಂಭಗಳಲ್ಲೂ ರಾರಾಜಿಸುತ್ತಿತ್ತು. ವಿವಿಧ ಹೂಗಳಿಂದ ಮಧು ಸಂಗ್ರಹಿಸಿದಂತೆ ವಿಶ್ವದೆಲ್ಲೆಡೆಯಿಂದ ಶ್ರೇಷ್ಠ ಸಾಹಿತಿಗಳ ಕಥೆಗಳನ್ನು ಕನ್ನಡಕ್ಕೆ ತಂದಿರುವ ಸಂಕಲನದಲ್ಲೂ ಸಿಹಿ ಜೇನ ಹನಿಗಳಂಥ ಕಥೆಗಳೇ ಇವೆ. ವಿಶ್ವದ ನಾನಾ ಭಾಗದ ಜನರು ಬದುಕನ್ನು ಸ್ವೀಕರಿಸಿದ ಪರಿಯನ್ನು ಶ್ರೇಷ್ಠ ಸಾಹಿತಿಗಳು ದಾಖಲಿಸಿದ್ದು, ನೋವಿಗೂ ನಲಿವಿಗೂ ಸಮಾನಾಂತರವಾಗಿ ಸ್ಪಂದಿಸಿದ್ದಾರೆ. ಕಥೆ ಬರೆಯುವುದೆಂದರೆ ಮನುಷ್ಯ ಮನುಷ್ಯನನ್ನು ಆತ್ಮೀಯ ಭಾವದೊಂದಿಗೆ ಪರಸ್ಪರ ಸ್ವಾಗತಿಸುವುದು ಎಂದರೆ ಸರಿಯಾದೀತೇನೋ ಎಂಬಷ್ಟು ಮಾರ್ದವತೆ ತುಂಬಿದ ಕಥೆಗಳು. ಕಳೆದ ಎರಡು ಶತಮಾನಗಳಿಂದೀಚೆಗೆ ಇವೆಲ್ಲ ಬರೆಯಲ್ಪಟ್ಟಿವೆ

Related Books