‘ಜನಮನ ನಾಯಕ’ ಪ್ರಕಾಶ್ ಅಯ್ಯರ್ ಅವರ ಕೃತಿಯ ಕನ್ನಡಾನುವಾದ. ಹಿರಿಯ ಲೇಖಕ ಮಹಾಬಲೇಶ್ವರರಾವ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಜ ಜೀವನಕ್ಕೆ ಸ್ಪೂರ್ತಿ ತುಂಬುವ ಕತೆಗಳು ಸಂಕಲನಗೊಂಡಿವೆ. ಪರಿಣಾಮಕಾರಿ, ವೃತ್ತಿಪರ ಆತ್ಮೀಯ ನಾಯಕತ್ವ ರೂಪುಗೊಳ್ಳುವ ಬಗೆಯನ್ನು ಪ್ರಕಾಶ್ ಅಯ್ಯರ್ ಜಗತ್ತಿನಾದ್ಯಂತದಿಂದ ಆಯ್ದು ತೆಗೆದ ಸ್ವಾರಸ್ಯಕರ ಅಖ್ಯಾನಗಳು ಹಾಗೂ ಸಾಮತಿಗಳ ಮೂಲಕ ಚೇತೋಹಾರಿಯಾಗಿ ನಿರೂಪಿಸಿದ್ದಾರೆ.
ಚಾಲಕ, ತಾಯಿ ಜಿರಾಫೆ, ಅಬ್ರಾಹಂ ಲಿಂಕನ್, ಫುಟ್ಬಾಲ್ ಆಟಗಾರರು- ಹೀಗೆ ವೈವಿಧ್ಯಮಯವಾದ ಮೂಲಗಳಿಂದ ಅವರು ಪಾಠಗಳನ್ನು ಆಯ್ದುಕೊಂಡಿದ್ದಾರೆ. ಆಹಾರದಂಗಡಿಯಲ್ಲಿ ಬರ್ಗರ್ ಗಳನ್ನು ತಟ್ಟುತ್ತಾ ನಾಯಕತ್ವದ ಗುಣವನ್ನು ದಿಢೀರ್ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಿಮ್ಮೊಳಗಿನ ನಾಯಕನನ್ನು ಪ್ರಕಾಶಕ್ಕೆ ತರಲು ಈ ಎಲ್ಲ ಕತೆಗಳು ಸ್ಫೂರ್ತಿದಾಯಕವಾಗಿವೆ.
©2024 Book Brahma Private Limited.