ಸಾಹಿತಿ ಹಾಗೂ ಅನುವಾದಕ ಎಸ್. ದಿವಾಕರ ಅವರು ವಿವಿಧ ದೇಶಗಳ ಉತ್ತಮ ಹಾಗ್‌ಊ ಸಣ್ಣ ಕಥೆಗಳನ್ನು ಆಯ್ದು ಅನುವಾದಿಸಿ ನೀಡಿದ್ದೇ ಈ ಕೃತಿ-ಜಗತ್ತಿನ ಅತಿ ಸಣ್ಣ ಕತೆಗಳು. ಕಥೆಯ ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿಯಲ್ಲಿ ದೇಶ-ದೇಶಗಳ ವೈವಿಧ್ಯತೆಯನ್ನು, ಸಾಂಸ್ಕೃತಿಕ ಭಿನ್ನತೆಯನ್ನು ಕಾಣಬಹುದು. ಈ ಕೃತಿಯು ಕಥೆಗಳ ವಿಭಿನ್ನತೆ ದೃಷ್ಟಿಯಿಂದ ಅತ್ಯಂಥ ಮಹತ್ವದ್ದು ಎಂಬ ಅಭಿಪ್ರಾಯ ಸಾಹಿತ್ಯಕ ವಲಯದಲ್ಲಿ ವ್ಯಾಪಕವಾಗಿದೆ.
©2024 Book Brahma Private Limited.