ನೊಬೆಲ್ ಪ್ರಶಸ್ತ್ರಿ ಪುರಸ್ಕೃತ ಹೆಮಿಂಗ್ವೆ ಇಂಡಿಯನ್ ಕ್ಯಾಂಪ್ ಮ್ತು ಇತರ ಕಥೆಗಳು ಕೃತಿಯು ಎಸ್.ಗಂಗಾಧರಯ್ಯ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಮನುಷ್ಯ ವೈಯುಕ್ತಿಕ ಮತ್ತು ಸಾರ್ವಜನಿಕ, ಸಾರ್ವಜನಿಕವಾಗಿ ಬದುಕುತ್ತ ಹೋದಷ್ಟೋ ಅವನ ಭಾಷೆ ಸೊರಗುತ್ತದೆ. ಮಾತಿಗೆ ಹಳಸಲು ವಾಸನೆ ಬರುತ್ತೆ, ವಿಚಾರಗಳು ಸತ್ತು ಹೋಗುತ್ತವೆ... ಹೆಮಿಂಗ್ವೆ ಥರದವರು ಈ ದಿವಂಗತ ಸ್ಥಿತಿಯಿಂದ ದೂರ ಇರಲು ಯತ್ನಿಸುತ್ತಾರೆ.
ಇನ್ನು ನೊಬೆಲ್ ಬಹುಮಾನ ಪಡೆಯುವುದಕ್ಕಾಗಿ ಕಳಿಸಿದ ಹೇಳಿಕೆಯಲ್ಲಿ ಹೆಮಿಂಗ್ವೆ ಹೀಗೆ ಹೇಳಿಕೊಂಡಿದ್ದಾರೆ, “ಬರೆಯುವುದು ಏಕಾಂಗಿತನದ ಜೀವನ. ಬರೆಯುವುದನ್ನು ಯಾವ ಸಂಘ ಸಂಸ್ಥೆಗಳೂ ಕಲಿಸಲಾರವು. ಸಾಹಿತಿ ಜನತೆಯ ಗೌರವ ಸಂಪಾದಿಸಿ ಮೆರೆಯತೊಡಗಿದಂತೆಲ್ಲ ಆತನ ಕಲೆ ನಶಿಸುತ್ತಾ ಹೋಗುತ್ತದೆ. ಯಾಕೆಂದರೆ ಸಾಹಿತಿ ಒಬ್ಬನೇ ಕೂತು ಅನಂತತೆಯನ್ನು ಎದುರಿಸುತ್ತಾನೆ ಅಥವಾ ಎದುರಿಸುವುದರಲ್ಲಿ ವಿಫಲನಾಗುತ್ತಾನೆ. ಉತ್ತಮ ಸಾಹಿತಿಗೆ ಪ್ರತಿಯೊಂದು ಹೊಸ ಕೃತಿಯೂ ಹೊಸ ಆರಂಭ. ತನ್ನನ್ನೇ ಮೀರುವ ಕ್ರಿಯೆ. ಆತ ಯಾರೂ ಬರೆಯದೇ ಇದ್ದ ಅನನ್ಯ ಸೃಷ್ಟಿಗಾಗಿ ಪ್ರಯತ್ನಿಸಬೇಕಾಗುತ್ತದೆ; ಯಾರ ನೆರವೂ ಇಲ್ಲದೆ ಸೃಷ್ಟಿಸಬೇಕಾಗುತ್ತದೆ. ಸಾಹಿತಿಯಾದವನು ತನಗನಿಸಿದ್ದನ್ನು ಸಾಹಿತ್ಯವಾಗಿ ಬರೆಯಬೇಕು, ಮಾತಾಡುತ್ತಾ ಹೋಗಬಾರದು ಎಂದಿದೆ.
©2024 Book Brahma Private Limited.