ಭಾರತೀಯ ವಿವಿಧ ಭಾಷೆಗಳ ಕಥೆಗಳನ್ನು ಇಂಗ್ಲಿಷ್ ಮೂಲಕ ಆಗಾಗ ಅನುವಾದ ಮಾಡಿದ್ದ 32 ಕತೆಗಳೊಂದಿಗೆ ಸಿಂಗರ್ ನ ಕತೆಯೊಂದು ಕೂಡಿರುವ ಅನುವಾದ ಕತೆಗಳ ಸಂಕಲನ ’ಹಸಿರು ನಿಶಾನೆ’.
ಈ ಕತೆಗಳಲ್ಲಿ ಭಾರತೀಯ ಹೆಣ್ಣಿನ ವಿವಿಧ ಮುಖಗಳು ನಮಗೆ ಪರಿಚಯವಾಗುತ್ತವೆ. ಅವಳ ಮನೋ ಸಂದರ್ಭಗಳು ಕತೆಯ ವಸ್ತು ತಂತ್ರ ನಿರೂಪಣೆ ವಿಧಾನ-, ಸಾಮಾಜಿಕ ವಿನ್ಯಾಸದ ಹಲವು ಆಯಾಮಗಳಲ್ಲಿ ಪ್ರಕಟಿತವಾಗಿವೆ.
ಶ್ರೀಧರ ಪಿಸ್ಸೆ ಅವರು 1959ರ ಏಪ್ರಿಲ್ 24 ರಂದು ಕನಕಪುರದಲ್ಲಿ ಜನಿಸಿದರು. ‘ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ’ ಅಧ್ಯಯನಕ್ಕೆ ಪಿಎಚ್ ಡಿ. ಲಭಿಸಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಖಾಸಗಿ ವಲಯದಲ್ಲಿ ವೃತ್ತಿ ಆರಂಭಿಸಿದ ಅವರು ಹಂಪಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ 21 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಹಸಿರು ನಿಶಾನೆ’ ಅವರ ಅನುವಾದಿತ ಕಥಾ ಗುಚ್ಛ. ...
READ MORE