ತಮಿಳುನಾಡಿನ ಪ್ರಸಿದ್ಧ ಕಥೆಗಾರರಾದ ಟಿ. ಜಾನಕಿರಾಮನ್ ಅವರ ಗುಡಿಗಂಟೆ ಮತ್ತು ಇತರ ಕಥೆಗಳು ಎಂಬ ಹೆಸರಿನ ಈ ಕಥಾಸಂಕಲನನ್ನು ಕನ್ನಡ ತಮಿಳು ಭಾಷೆಗಳ ಸಾಂಸ್ಕೃತಿಕ ಕೊಂಡಿಯಾಗಿರುವ ಕೆ ನಲ್ಲತುಂಬಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಈ ಪುಸ್ತಕಕ್ಕೆ ಖ್ಯಾತ ಕತೆಗಾರ ಎಸ ದಿವಾಕರ್ ಬೆನ್ನುಡಿ ಬರೆದಿದ್ದು, ‘ಇಲ್ಲಿರುವ ಎಲ್ಲಾ ಕತೆಗಳಲ್ಲಿ ನಿಜವಾಗಿ ಉಸಿರಾಡುತ್ತಿರುವವರು ನಾವು ಜೀವನದಲ್ಲಿ ಸದಾ ಎದುರುಗೊಳ್ಳುವ, ಆದರೆ ಅಷ್ಟಾಗಿ ಗಮನಿಸದ ಸಾಮಾನ್ಯ ಮನುಷ್ಯರು. ಬಹುಮಟ್ಟಿಗೆ ಅಸಹಾಯಕರಾಗಿರುವ ಎಲ್ಲರೂ ರಾಗದ್ವೇಷಗಳಿಂದ ದೈನಂದಿನ ತಾಪತ್ರಯಗಳಿಂದ ಬಳಲುತ್ತಿದ್ದರೂ ತಮ್ಮ ಸಣ್ಣ ಸಣ್ಣ ಸಾಹಸಗಳಿಂದ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳಲು ಹೋಗುತ್ತಿರುವವರು ಎನ್ನುತ್ತಾರೆ. ಜೊತೆಗೆ, ಜಾನಕೀರಾಮನ್ ಇಂಥವರ ಜಗತ್ತನ್ನು ನಿರೂಪಿಸುವಾಗ ಇದರಲ್ಲಿ ಕೆಲವೊಮ್ಮೆ ಹಠಾತ್ತಾಗಿ ಕಾಣಿಸಿಕೊಳ್ಳುವ ಸದ್ಗುಣವನ್ನೂ ವೈಪರೀತ್ಯವನ್ನೂ ಅನಿರೀಕ್ಷಿತ ರೀತಿಯಲ್ಲಿ ಕಾಣಿಸುವ ,ಮೂಲಕ ಕತೆಗಳಿಗೆ ಹೊಸದೊಂದು ಆಯಾಮವನ್ನೇ ಕೊಟ್ಟುಬಿಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಕೃತಿ ತಮಿಳುನಾಡು ಸರ್ಕಾರದ ತಮಿಳು ಭಾಷಿಕ ಕ್ಲಾಸಿಕ್ ಕೃತಿಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಯೋಜನೆಯಂಗವಾಗಿ ಈ ಕೃತಿ ಪ್ರಕಟವಾಗಿದೆ.
©2024 Book Brahma Private Limited.