ಹತ್ತೊಂಬತ್ತನೆಯ ಶತಮಾನದ ಪ್ರಸಿದ್ದ ಅಮೆರಿಕನ್ ಕಾದಂಬರಿಕಾರ ಹರ್ಮನ್ ಮೆಲ್ವಿಲನನ್ನು ಕನ್ನಡಕ್ಕೆ ಪರಿಚಯಿಸುವ ಉದ್ದೇಶದಿಂದ ಅವನ ನಾಲ್ಕು ಸಣ್ಣ ಕತೆಗಳನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ. ಇವುಗಳೆಲ್ಲವೂ The Piaza Tales (1856) ಎಂಬ ಅವನ ಕಥಾಸಂಕಲನದಲ್ಲಿ ಪ್ರಕಟವಾದವು. ಓದುಗರಿಗೆ ಸಹಾಯಕವಾಗುವಂತೆ ಮೆಲ್ನ ಕುರಿತಾದ ಒಂದು ಪರಿಚಯ ಲೇಖನವನ್ನೂ, ಕೆಲವು ಕತೆಗಳನ್ನು ಒಳಗೊಂಡ 'The Encantadas, Or Enchanted Isle' ಎಂಬ ಸಂಕಲನದ ಕುರಿತಾದ ಒಂದು ಅನುಬಂಧವನ್ನೂ ನೀಡಲಾಗಿದೆ. ಇಲ್ಲಿನ ಮೂರು ಕತೆಗಳು ಈ 'ಎಂಕಾಂಟಡಾಸ್ ಐಲ್ಸ್' ಸಂಕಲನದ ಭಾಗವಾಗಿದೆ. ಎಂಕಾಂಟಡಾಸ್ ದ್ವೀಪಗಳ ಕುರಿತಾದ ಬರಹಗಳನ್ನು ಮೆಲ್ವಿಲ್ ಕತೆಗಳೆಂದು ಕರೆಯದೆ, "ರೇಖಾಚಿತ್ರಗಳು (Sketches) ಎಂದು ಹೆಸರಿಸುತ್ತಾನೆ. ಎಂಕಾಂಟಡಾಸ್ ಎನ್ನುವುದೊಂದು ಸ್ಪ್ಯಾನಿಶ್ ಪದ; ' ಮೋಡಿ', 'ಮೋಹಿನಿ' ('ಸಮೋಹಿನಿ' ಎಂಬ ಅರ್ಥದಲ್ಲಿ), ಯಕ್ಷಿಣಿ' ಎಂದೆಲ್ಲ ಅರ್ಥ, ದಕ್ಷಿಣ ಶಾಂತಸಾಗರದ ಗಲಾಪಾಗೊಸ್ ದ್ವೀಪಗಳ ಜನಪ್ರಿಯ ಹೆಸರು ಇದು. ಗಲಾಪಾಗೊಸ್ ಕೂಡಾ ಒಂದು ಸ್ನಾನಿಶ್ ಪದವೇ; ಈ ದ್ವೀಪಗಳಿಗೆ ಸಂಬಂಧಿಸಿದಂತೆ, ಗಲಾಪಾಗೊಸ್ ಎಂದರೆ ದೊಡ್ಡ ತರದ ಕೂರ್ಮಗಳು ಎಂದು ಅರ್ಥ. ಈ ಪ್ರದೇಶಗಳು ಕೂರ್ಮಗಳಿಗೆ ಪ್ರಸಿದ್ದವಾದವು. ಕೆಲವು ಕಾಲ ನಾವಿಕನಾಗಿದ್ದ ಮೆಲ್ವೇಲ್ ತನ್ನ ಬರಹಗಳಲ್ಲಿ ತಾನು ನೇರವಾಗಿ ಅನುಭವಿಸಿದ ಅಥವಾ ಇತರರಿಂದ ಕೇಳಿದ ಸಂಗತಿಗಳಿಗೆ ಕತೆಯ ರೂಪಗಳನ್ನು ಕೊಡುತ್ತಾನೆ. ರೇಖಾಚಿತ್ರಗಳಾಗಿರಲಿ, ಕತೆಗಳಾಗಿರಲಿ, ಮೆಲ್ವಿಲ್ ಏನೇ ಬರೆದರೂ ಅವುಗಳಲ್ಲಿ ಕತೆಗಾರಿಕೆಯ ಸೊಗಸು ಇದ್ದೇ ಇರುತ್ತದೆ.
ವಿದ್ಯಾರ್ಥಿ ದೆಸೆಯಿಂದಲೇ ಮೆಲ್ವಿಲ್ ಬರವಣಿಗೆ ಬಗ್ಗೆ ಆಕರ್ಷಿತರಾಗಿದ್ದ ಸಾಹಿತಿ ಕೆ.ವಿ. ತಿರುಮಲೇಶ್ ಅವರು ಅವನನ್ನು ಕನ್ನಡಕ್ಕೆ ಭಾವಾಂತರಿಸಿದ್ದಾರೆ.
©2024 Book Brahma Private Limited.