ಭ್ರಾಂತಿ ವಿಲಾಸ-ಕಿರು ಕಾದಂಬರಿಯಂತಿರುವ ಕೃತಿಯು ಮೊದಲು 1877 ನಂತರ 1899ರಲ್ಲಿ ಪ್ರಕಟವಾಯಿತು. ಇದೀಗ 3ನೇ ಆವೃತ್ತಿ. ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯು ವಿದ್ಯಾಲಯಗಳಲ್ಲಿ ಇಡುವ ಕೃತಿ ಎಂದು ಪಠ್ಯ ಪುಸ್ತಕ ಸಮಿತಿಯು ನಿರ್ಣಯಿಸಿತ್ತು. ಆಂಗ್ಲ ಕವಿ ಷೇಕ್ ಸ್ಪೀಯರ್ ಅವರ ‘ಕಾಮಿಡಿ ಆಫ್ ಎರರ್‍ಸ್’ ನಾಟಕವನ್ನು ಬಂಗಾಳಿಯ ಕವಿ ಈಶ್ವರಚಂದ್ರ ವಿದ್ಯಾಸಾಗರ ಅವರು ನಾಟಕದ ಪಾತ್ರಗಳ ಹೆಸರುಗಳನ್ನು ಹಿಂದೂ ಧರ್ಮೀಯವಾಗಿಸಿ ಕಥಾ ರೂಪ ನೀಡಿದ್ದರು., ಇದು ಚಮತ್ಕಾರಕವಾಗಿಯೂ ಮತ್ತು ಭ್ರಾಂತಿಕಾರಕವಾಗಿಯೂ ಇತ್ತು. ಅದನ್ನು ಕನ್ನಡಕ್ಕೆ ತರಬೇಕೆಂಬ ಅದಮ್ಯ ಆಸಕ್ತಿಯ ಫಲವೇ ಈ ಕೃತಿ. ಕಥಾರೂಪದ ಈ ಕೃತಿಯನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾಗಿ ಲೇಖಕರು ಹೇಳಿದ್ದಾರೆ.
©2024 Book Brahma Private Limited.