ಲೇಖಕ ಮಾಧವ ಚಿಪ್ಪಳಿ ಅವರು ಅನುವಾದಿಸಿದ ಪುಸ್ತಕ ʼಆರು ಟಾಲ್ಸ್ಟಾಯ್ ಕಥೆಗಳು. ಪ್ರಸ್ತುತ ಸಂಕಲನದ ಎಲ್ಲಾ ಕತೆಗಳೂ ಟಾಲ್ಸ್ಟಾಯ್ ಅವರ ದ್ವಿತೀಯಾರ್ಧದ ಬರವಣಿಗೆಯನ್ನು ಪ್ರತಿನಿಧಿಸುವ ಕೆಲವು ಮುಖ್ಯ ನಿದರ್ಶನಗಳಾಗಿವೆ. ಪುಸ್ತಕದ ಬಗ್ಗೆ ಮುನ್ನುಡಿ ಬರೆದ ಲೇಖಕ ಟಿ.ಪಿ. ಅಶೋಕ ಅವರು, ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧು ಬಾಂಧವರು, ನೆರೆ ಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ತಮ್ಮ ಸರಳತೆ ಮತ್ತು ಸಹಜತೆಗಳಿಂದಾಗಿ ಮನಮುಟ್ಟುತ್ತವೆ. ಅಪಾರ ಜೀವನಾನುಭವದಿಂದ ಮೂಡಿಬಂದ ವಿವೇಕ ಈ ಕತೆಗಳ ರೂಪದಲ್ಲಿ ನಿರೂಪಣೆಗೆ ಒಳಗಾಗಿದೆ ಎನಿಸುತ್ತದೆ. ಈ ಎಲ್ಲ ಕತೆಗಳ ಕೇಂದ್ರದಲ್ಲಿರುವುದು ಸಾಮಾನ್ಯ ರಷ್ಯನ್ನರು. ಅವರ ಬದುಕಿನ ಸುತ್ತ ಹೆಣೆದ ದೃಷ್ಟಾಂತಗಳಂತಿರುವ ಈ ಕತೆಗಳು ಮೇಲುನೋಟಕ್ಕೆ ಸರಳವೆನಿಸಿದರೂ ಬದುಕನ್ನು ಕುರಿತು ಅನೇಕ ಮೂಲಭೂತವಾದ ತಾತ್ತ್ವಿಕ ಪ್ರಶ್ನೆಗಳ ಚಿಂತನ ಮಂಥನವನ್ನು ನಡೆಸುತ್ತವೆ ಎಂದು ಹೇಳಿದ್ದಾರೆ..
©2024 Book Brahma Private Limited.