ಆರ್ತ-ಕೊಂಕಣಿ ಲೇಖಕಿ ಡಾ. ಜಯಂತಿ ನಾಯ್ಕ್. ಅವರ ಕಥೆಗಳನ್ನು ಲಖಕಿ ಗೀತಾ ಶೆಣೈ (ಗೀತಾ ಬಾಲಿ ನಾಯಕ್ ಪಿ.) ಅವರು ಕನ್ನಡೀಕರಿಸಿದ್ದಾರೆ. ಈ ಕಥೆಗಳಲ್ಲಿ ಗ್ರಾಮೀಣ ಮತ್ತು ನಗರ ಜೀವನದ ಶೈಲಿ, ಸ್ಥಳೀಯ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಆಚರಣೆ ಮತ್ತು ಪದ್ಧತಿಗಳ ವಿವರ, ಹಳ್ಳಿಯ ಜನರ ಬಡತನ, ಅನಕ್ಷರತೆ, ಹಾಗೂ ಮೂಢನಂಬಿಕೆ, ಕಾಲಾನುಕ್ರಮದಲ್ಲಿ ನಶಿಸಿ ಹೋಗುತ್ತಿರುವ ನೆಲಸಂಸ್ಕೃತಿಯ ಕುರುಹುಗಳ ಕುರಿತಾದ ಕಾಳಜಿ, ಸ್ತ್ರೀಯ ಆಂತರಿಕ ಭಾವನೆಗಳು ಮತ್ತು ಅವಳಲ್ಲಿ ಮೂಡಿರಬಹುದಾದ ಬಿಡುಗಡೆಯ ಆಶಯ ಇತ್ಯಾದಿ ಗುರುತಿಸಬಹುದು. ವ್ಯಕ್ತಿಗತ ನೆಲೆಗಿಂತಲೂ ಸಾಮುದಾಯಿಕ ಪರಿಪ್ರೇಕ್ಷದ ಸಾಮಾಜಿಕ ಪಾತಾಳಿಯಲ್ಲಿ ಬದುಕನ್ನು ಕಾಣುವ ಅಪರೂಪದ ದರ್ಶನ ಇವರ ಕಥೆಗಳಲ್ಲಿ ಸಿಗುತ್ತದೆ.
©2024 Book Brahma Private Limited.