ಪ್ರಭಾಶಾಸ್ತ್ರಿ ಜೋಶ್ಯುಲ ಅವರು ಹುಟ್ಟಿದ್ದು ಆಂಧ್ರಪ್ರದೇಶ "ಮಂಡಪಾಕ" ಎನ್ನುವ ಹಳ್ಳಿಯಲ್ಲಿ. ತಂದೆ ವೆಂಕಯ್ಯ ಅವರು ರೈತರು, ತಾಯಿ ಭಾಸ್ಕರಮ್ಮ ಕರ್ನಾಟಕ ಸಂಗೀತದ ಗಾಯಕಿ. 17 ವಯಸ್ಸಲ್ಲಿ ಡಾ.ಜೆ.ಸಿ.ವಿ.ಶಾಸ್ತ್ರಿಗಳ ಜೊತೆ ವಿವಾಹಿತರಾದರು.ಅವರು ಮೈಸೂರು ಯೂನಿವರ್ಸಿಟಿದಲ್ಲಿ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಪ್ರೊಫ್ಸರ್ ಆಗಿದ್ದರು. ತೆಲುಗು, ಕನ್ನಡ ರಚಿಸುವ ಆಸಕ್ತಿ ಹೊಂದಿರುವ ಇವರು ಎಂ.ಎ.(ಚರಿತ್ರೆ),ಎಂ.ಎ.(ತೆಲುಗು) ಪದವಿ ಪಡೆದಿದ್ದಾರೆ.
ಪ್ರಶಸ್ತಿಗಳು: ಆತ್ಮಶ್ರೀ ಕನ್ನಡ ಸಾಹಿತ್ಯ ಪ್ರತಿಷ್ಠಾನ(ರಿ)ಬೆಂಗಳೂರು ಅವರು " ಮಥರ್ ತೆರಿಸ್ಸಾ" ಸದ್ಭಾವನಾ ಪುರಷ್ಕಾರ ಕೊಟ್ಟು ಗೌರವಿಸಿದ್ದಾರೆ.
ಹಾಸ್ಯಕವಿ ವತಂಸ,ಕವಿತಾಶ್ರೀ,ಕಲಾತ್ಮ, ಕವಿಚಂದ್ರ. ತೆಲುಗು ಅವಾರ್ಡ್ಸ್: ಮಾತೃ ಭಾಷೆಯಲ್ಲಿ 6 ಪುಸ್ತಗಳು ಮುದ್ರಿತವಾಗಿವೆ. ಡಾ.ಬಿ.ಆರ್.ಅಂಬೇಡ್ಕರ್ ಜಾತೀಯ ಲಿಟರರಿ ಅವಾರ್ಡ್,ಹೈದರಾಬಾದ್ ದಲ್ಲಿ ನಡೆದ ಮೂರು ದಿವಸ ಪ್ರಪಂಚ ಕವಿಗಳ ಮಹಾಸಭೆಯಲ್ಲಿ ಕರ್ನಾಟಕ ದಿಂದ ಕವಿಯಿತ್ರಿಯಾಗಿ ಭಾಗವಹಿಸಿ ಪುರಸ್ಕಾರ ಪಡೆದಿದ್ದಾರೆ. ಉದಯಕಲಾನಿಧಿ ಯಾದಾದ್ರಿ ಶಿಲ್ಪಕಲಾ ಕವಿಯಾಗಿ ಸನ್ಮಾನ ಹೊಂದಿರುವುದಲ್ಲದೆ, ನರೇಂದ್ರ ಸಾಹಿತ್ಯ ಸಮ್ಮೇಳನದಲ್ಲಿ "ಗುರುಶ್ರೀ ರತ್ನ" ಪುರಸ್ಕಾರ,ಒಂದು ತಿಂಗಳಲ್ಲಿ 150 ತೆಲುಗು ಕವನಗಳನ್ನು ಬರೆದು "ಸಾಹಿತ್ಯ ವಿಕ್ರಮಾರ್ಕ" ಪುರಸ್ಕಾರ ಗೌರವ ಹೊಂದಿದ್ದಾರೆ. 33 ಗಂಟೆ,44 ನಿಮುಷ,55 ಸೆಕೆಂಡು ಗಳಲ್ಲಿ ಕವಿತಾಗಾನ ಮಾಡಿ, ತೆಲುಗು ಬುಕ್ ಆಫ್ ರಿಕಾರ್ಡ್ಸ್,ತಾನಾ ಅಂದರೆ ದಕ್ಷಿಣ ಅಮೆರಿಕಾ ತೆಲುಗು ಸಭೆದಿಂದ "ತಾನಾ ಬುಕ್ ಆಫ್ ರಿಕಾರ್ಡ್ಸ್" ಪುರಸ್ಕಾರ ಹೊಂದಿದ್ದಾರೆ