ಎಸ್ ಟಿ. ರಾಮಚಂದ್ರ ಮೂಲತಃ ಮಂಡ್ಯ ಜಿಲ್ಲೆಯ ಸಿದ್ದಯ್ಯನಕೊಪ್ಪಲಿನವರು. ಬ್ಯಾಂಕಿಂಗ್ ಆಡಳಿತ ಶಿಕ್ಷಣ ಹಾಗೂ ಅಧ್ಯಯನದಲ್ಲಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಮುಂಬೈ, ದೆಹಲಿ, ತಿರುವನಂತಪುರಂ, ಮೈಸೂರು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಲ್ಲಿ ಸೇವೆಸಲ್ಲಿಸಿದ್ದಾರೆ. ಕ್ಷೇತ್ರೀಯ ಕಛೇರಿ, ವೃತ್ತ ಕಛೇರಿ ಹಾಗೂ ಮುಖ್ಯ ಕಛೇರಿಗಳನ್ನೊಳಗೊಂಡಂತೆ ಹಲವು ಶಾಖೆಗಳಲ್ಲಿ ಸೇವೆ ಸಲ್ಲಿಕೆ, ಶಾಖಾ ವ್ಯವಹಾರ, ತಂತ್ರಜ್ಞಾನ ಅಳವಡಿಕೆ, ಪರಿಶೀಲನೆ, ವಸೂಲಾತಿ, ಸಾಲ, ಮಾರ್ಕೆಟಿಂಗ್, ಸಾಂಸ್ಥಿಕ ಸಂವಹನೆ ಮತ್ತು ಗ್ರಾಹಕ ಸಂಪರ್ಕ ಅಭಿವೃದ್ಧಿ, ಸಾಮಾನ್ಯ ಆಡಳಿತ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ, ನೌಕರ ಸಂಬಂಧಿತ ವಿಷಯಗಳು, ಆಸ್ತಿ ಸಂರಕ್ಷಣೆ, ಆಡಳಿತಾತ್ಮಕ ಭಾಷೆ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಜ್ಞಾನ BGSE ಪ್ರಾಪರ್ಟೀಸ್ & ಸೆಕ್ಯೂರಿಟೀಸ್‌ನಲ್ಲಿ ನಿರ್ದೇಶಕಾರಾಗಿ ಹಾಗೂ ಕೆನರ ಬ್ಯಾಂಕ್‌ನ ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಹಲವಾರು ವಿಶ್ವವಿದ್ಯಾಲಯಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ತರಬೇತಿ ವಿದ್ಯಾಲಯಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಮುಂಬೈ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಗೌರವ ಉಪನ್ಯಾಸಕರಾಗಿಯು ಸೇವೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಿಯತಕಾಲಿಕೆ ಮತ್ತು ದಿನಪತ್ರಿಕೆಗಳಲ್ಲಿ ಕಥೆ, ಲೇಖನ, ಸಂದರ್ಶನ, ಸಂಶೋಧನೆಯನ್ನು ಪ್ರಕಟಿಸಿದ್ದಾರೆ.
ಪ್ರಶಸ್ತಿ: ಆದಿಗುರು ಶಂಕರಾಚಾರ್ಯ ಪ್ರಕಟಣೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಹೊಯ್ಸಳ ಪ್ರಶಸ್ತಿ, ಹಾಲ್ ಆಫ್ ಫೇಮ್ ಸರ್ವತೋಮುಖ ಪ್ರಶಸ್ತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶ್ರೇಷ್ಠ ಸಂವಹನಕಾರರಿಗೆ ನೀಡಲಾಗುವ ಚಾಣಕ್ಯ ಪ್ರಶಸ್ತಿ, ಹಂಸಜ್ಯೋತಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ , ವಿಶ್ವಚೇತನ ಪ್ರಶಸ್ತಿಗಳು ದೊರೆತಿವೆ.
ಕೃತಿಗಳು: ಆದಿಗುರು ಶಂಕರಾಚಾರ್ಯ, ಬದುಕಿಗೆ ನೀತಿ ಕಥೆಗಳು, ಗ್ರಂಥಲಕ್ಷ್ಮೀ