ಯುಗದ ಹೆಜ್ಜೆ

Author : ಎಂ.ಎಸ್. ವೀರಘಂಟಿಮಠ

Pages 288

₹ 150.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560075
Phone: 99 - 23183311, 23183312

Synopsys

‘ಯುಗದ ಹೆಜ್ಜೆ’ ಹಿಂದಿ ಲೇಖಕಿಯರ ಸಣ್ಣ ಕತೆಗಳ ಕನ್ನಡಾನುವಾದ. ಡಾ. ಎಂ.ಎಸ್. ವೀರಘಂಟಿ ಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಸುಭದ್ರಾ ಕುಮಾರಿ ಚೌಹಾಣ, ಶಿವಾನಿ, ಕೃಷ್ಣಾ ಸೋಬತಿ, ಮನ್ನೂ ಭಂಡಾರಿ, ಮಾಲತಿ ಜೋಶಿ, ಮಂಜುಲ್ ಭಗತ್, ಮೃದುಲಾ ಗರ್ಗ್, ನಾಶಿರಾ ಶರ್ಮಾ, ಮಮತಾ ಕಾಲಿಯಾ, ಸೂರ್ಯ ಬಾಲಾ, ಚಿತ್ರಾ ಮುಗ್ದಲ್ ಮೊದಲಾದ ಪ್ರಮುಖ ಕತೆಗಾರ್ತಿಯರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.

ಹಿರಿ-ಕಿರಿಯರ ಕತೆಗಳು ಈ ಸಂಕಲನದಲ್ಲಿವೆ. ಇಲ್ಲಿರುವ ಬಹುತೇಕ ಕತೆಗಳು ಭಾರತದ ಹೆಣ್ಣು ಸಾಗಿ ಬಂದ ಹಾದಿಯನ್ನು ತೆರೆದಿಡುತ್ತವೆ. ಮಹಿಳಾ ಸಾಹಿತ್ಯದ ಬೆಳವಣಿಗೆಯ ಜೊತೆಗೆ ಸ್ತ್ರೀವಾದ ಹೇಗೆ ಹಿಂದಿ ಸಾಹಿತ್ಯದಲ್ಲಿ ಕತೆಗಾರರಿಂದ ಕತೆಗಾರರಿಗೆ ಭಿನ್ನವಾಗಿ ವಿಸ್ತಾರಗೊಳ್ಳುತ್ತಾ ಹೋಯಿತು ಎನ್ನುವುದನ್ನು ಈ ಕೃತಿ ತಿಳಿಸಿಕೊಡುತ್ತದೆ. 

About the Author

ಎಂ.ಎಸ್. ವೀರಘಂಟಿಮಠ

ಡಾ. ಎಂ.ಎಸ್. ವೀರಘಂಟಿಮಠ ಅವರು ಮೂಲತಃ ವಿಜಯಪುರದವರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹಮ್ಮಿಕೊಂಡ ಹಿಂದಿ ಲೇಖಕಿಯರ ಸಣ್ಣ ಕತೆಗಳ ಅನುವಾದ ಕಮ್ಮಟದಲ್ಲಿ ಹೊರಬಂದ ಅನುವಾದಿತ ಕತೆಗಳ ಸಂಕಲನವೇ 'ಯುಗದ ಹೆಜ್ಜೆ'. ಡಾ. ಎಂ. ಎಸ್. ವೀರಘಂಟಿ ಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ನೆನಪು ಸಂಜೀವಿನಿ ಮತ್ತು ನಾವು ನಿಮ್ಮವರೇ ಸ್ವಾಮಿ ಎನ್ನುವ ಎರಡು ಅನುವಾದಿತ ಕೃತಿಯನ್ನು ರಚಿಸಿದ್ದಾರೆ.  ...

READ MORE

Related Books