ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸಹಯೋಗದಲ್ಲಿ ಮರಾಠಿಯ ಸಣ್ಣಕಥೆಗಳನ್ನು ಅನುವಾದಿಸುವ ಕಮ್ಮಟದ ಫಲಶ್ರುತಿಯಾಗಿ ಈ ಪುಸ್ತಕ ಪ್ರಕಟಗೊಂಡಿದೆ. 30 ಜನರ ಹಿರಿಯ ಅನುವಾದಕರ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಇಂತಹ ಮಹತ್ವದ ಕೃತಿ ಹುಟ್ಟುಪಡೆಯಿತು. ಮರಾಠಿಯ ಪ್ರಸಿದ್ಧ ಕತೆಗಾರರಾದ ಲಕ್ಷ್ಮಣ ಗಾಯಕಾವಾಡ, ಲಕ್ಷ್ಮಣ ಮಾನೆ, ಶರಣಕುಮಾರ ಲಿಂಬೋಳೆ, ನೀಲಿಮಾ ಬೋರವರಣಕರ್, ನಾಗನಾಥ ಕೊತ್ತಾಪಲ್ಲೆ, ಅನಂತ ಮನೋಹರ, ಮಧುಮಂಗೇಶ ಕಣ ಕ, ಮಹಾದೇವ ಮೋರೆ, ರೇಖಾ ಬೈಜಲ್, ಮಂದಾಕಿನಿ ಭಾರದ್ವಜ್, ರಂಗನಾಥ ಪಠಾರೆಯವರ ಕಥೆಗಳು ಸೇರಿದಂತೆ ಒಟ್ಟು 23 ಕಥೆಗಳು ಇಲ್ಲಿವೆ. ಇಲ್ಲಿನ ಪ್ರತಿಯೊಂದು ಕಥೆಯೂ ಸಮಕಾಲೀನ ಸಮಸ್ಯೆಗಳನ್ನು ತನ್ನ ಕೇಂದ್ರದಲ್ಲಿರಿಸಿಕೊಂಡಿದ್ದು ಪಾತ್ರಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸುತ್ತವೆ ಹಾಗೂ ದಲಿತ-ಬಂಡಾಯ ಸಂವೇದನೆ, ಮಹಿಳಾ ಸಂವೇದನೆ, ರಾಜಕೀಯ, ಸಾಮಾಜಿಕ ಸಾಂಸ್ಕೃತಿಕ, ಧಾರ್ಮಿಕ ಬಿಕ್ಕಟ್ಟುಗಳನ್ನು ಚರ್ಚಿಸುತ್ತವೆ. ಈ ಕತೆಗಳು ಬದುಕಿನ ಅಸ್ಥಿರತೆ, ಮೇಟ್ರೋ ನಗರಗಳ ನಾಟಕೀಯ ಹಾಗೂ ಸಂವೇದನಾಹೀನ ಜೀವನ, ಸಂಬಂಧಗಳಲ್ಲಿನ ಪೊಳ್ಳು, ನಂಬಿದವರು ಮಾಡಿದ ಮೋಸ, ಮುಗ್ಧಜನರ ಮೇಲಿನ ಅನ್ಯಾಯ ಹೀಗೆ ಹತ್ತು ಹಲವು ಅಂಶಗಳನ್ನು ಈ ಕಥೆಗಾರರು ಬಹಳ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಎಲ್ಲ ಕಥೆಗಳನ್ನು ಅಷ್ಟೇ ಆಪ್ತತೆ ಹಾಗೂ ಪ್ರಬುದ್ಧತೆಯಿಂದ ಇಲ್ಲಿನ ಅನುವಾದಕರು ಕನ್ನಡೀಕರಿಸಿದ್ದಾರೆ.
©2024 Book Brahma Private Limited.