ರವೀಂದ್ರರ ಕಥಾಮಂಜರಿಯ ಎರಡನೆಯ ಸಂಪುಟ ಇದು. ಇದನ್ನು ಅಹೋಬಲ ಶಂಕರ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಏನೇ ಆದರೂ ದೇವತೆ ಬಗೆಗಿನ ನಿಷ್ಠೆಯನ್ನು ಕುರುಡಾಗಿ ಅನುಸರಿಸುತ್ತಿದ್ದ ವಿಧವೆಯೊಬ್ಬಳು, ಹಂದಿಯು ದೇವಸ್ಥಾನದ ಒಳಕ್ಕೆ ಪ್ರವೇಶಿಸಿದರೂ ಪರವಾಗಿಲ್ಲ ಆದರೆ ಕೀಳುಜಾತಿಯವರು ಪ್ರವೇಶಿಸಬಾರದು ಎಂದು ಮೊಂಡು ಹಠವನ್ನು ಹಿಡಿದ ಪ್ರಸಂಗ, ಗಂಡಸು ತಾನು ಮಾಡಿದ ತಪ್ಪಿನಿಂದ ಅಳುಕಿ, ಅದನ್ನು ಹೆಂಗಸಿನ ಕುತ್ತಿಗೆಗೆ ಕಟ್ಟಿ, ಅವಳನ್ನು ತೊರೆದು, ಧರ್ಮಶೀಲನಾಗಿದ್ದರೂ ವಿಧಿವಶದಿಂದ ಅವಳ ಎದುರು ತಾನೇ ಸಣ್ಣವನಾಗುವ, ಅವಳು ದೇವತೆಯಂತೆ ಕಾಣುವ ಕಥೆ ವಿಚಾರಕ , ಇಂತಹ ಮಾನವೀಯ ಹಾಗೂ ಅಮಾನವೀಯ ಮುಖಗಳನ್ನು ತೋರಿಸುವಂತಹ 31 ಕಥೆಗಳು ಈ ಸಂಪುಟದಲ್ಲಿದೆ.
©2024 Book Brahma Private Limited.