ಭಾರತೀಯ ಕವಿಗಳಲ್ಲಿ ಶ್ರೇಷ್ಟನಾದ ವಿದ್ಯಾಪತಿ ಕವಿಯ ’ಪುರುಷ ಪರೀಕ್ಷೆ’ ಸುಮಾರು 1412-16 ರಲ್ಲಿ, ರಚಿತವಾದದ್ದು. ಒಟ್ಟು 44 ಕತೆಗಳ ಸಂಕಲನ. ಇದನ್ನು ವಿಮರ್ಶಕ, ಅನುವಾದಕರಾದ ಡಿ. ಎ ಶಂಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಧೈರ್ಯ, ಸತ್ಯಪ್ರಿಯತೆ, ಋಜುತ್ವ, ಅಕಳಂಕ ಪ್ರೇಮ, ಮುಂತಾದವುಗಳ ಕತೆಯ ಜೊತೆಜೊತೆಗೇ ಇದನ್ನು ಪ್ರಶ್ನಿಸುವ, ತಮಾಷೆ ಮಾಡುವ ಕತೆಗಳೂ ಇವೆ.
ಇಲ್ಲಿನ ಅನೇಕ ಪಾತ್ರಗಳು ನೇರವಾಗಿ ವಿದ್ಯಾಪತಿಯ ಕಾಲದ ಚಾರಿತ್ರಿಕ ಸಂದರ್ಭದಿಂದಲೇ ಬಂದದ್ದಾಗಿದೆ. ಕಥಾ ಪರಂಪರೆಗಳಲ್ಲಿ- ಕಾವ್ಯ ಪರಂಪರೆಗಳಲ್ಲಿ ಯಾವುದು ವಿಸ್ತಾರವಾಗಿ, ಭಾವುಕವಾಗಿ, ತನ್ಮಯತೆಯಿಂದ ಶೋಧಿತವಾಗಿರುತ್ತದೋ ಅದರ ಚಿಕ್ಕ ಪ್ರತಿರೂಪವನ್ನು ವಿದ್ಯಾಪತಿ ಕವಿ ರಚಿಸಿದ್ದಾನೆ.
ಕೆಲವು ಕಥೆಗಳನ್ನು ಜಾಣತನದ ತಂತ್ರದ ಕಥೆಯನ್ನಾಗಿ ರೂಪಿಸುವ, ವ್ಯಂಗ್ಯಗಳಿಂದ ಇಡೀ ಕಥೆಯನ್ನು ಸೃಷ್ಟಿಸುತ್ತಾನೆ. ಅನೇಕ ಕಥೆಗಳಲ್ಲಿ ಇತಿಹಾಸದ ನಾಯಕರು ಕಾಣಿಸಿಕೊಳ್ಳುತ್ತಾರೆ. ಎಲ್ಲವನ್ನೂ ಒಡೆದು ಚಾತುರ್ಯದ ರಚನೆಗಳನ್ನಾಗಿ ವಿಂಗಡಿಸುವ ಕವಿ ವಿದ್ಯಾಪತಿಯು ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕಾಣುವ ಅಂತರ್ ಪಠ್ಯೀಯತೆಗೆ ಒಂದು ನಿರ್ದಿಷ್ಟ ಮಾದರಿಯಂತೆ ’ಪುರುಷ ಪರೀಕ್ಷೆ’ ಯನ್ನು ರಚಿಸಿದ್ದಾನೆ.
©2024 Book Brahma Private Limited.