‘ಪಾಪಿಯ ಪಶ್ಚಾತ್ತಾಪ’ ಪ್ರಪಂಚದ ಅತ್ಯುತ್ತಮ ಸಣ್ಣಕಥೆಗಳ ಸಂಪುಟ-1. ಡಾ. ಬಸವರಾಜ ಡೋಣೂರರ ಸಂಪಾದಕತ್ವದಲ್ಲಿ ಸಂಗ್ರಹಿತವಾಗಿದೆ. 12 ಕಥೆಗಳಿವೆ. ಇವು ಬರಹಗಾರನ ಮನಸ್ಸಿನ ತುಮುಲಗಳ ಪ್ರತಿಫಲನಗಳು.
ಸಂಪಾದಕರೇ ಬರೆದಿರುವಂತೆ ಇಲ್ಲಿಯ ಸಣ್ಣಕತೆಗಳು ಭಾವಗೀತೆಯ ತೀವ್ರತೆ, ಅದ್ಭುತ ಬಂಧ, ನವಿರತೆ ಎಲ್ಲವನ್ನೂ ಮೈಗೂಡಿಸಿಕೊಂಡಿವೆ. ಆ್ಯಂಟನ್ ಚಿಕಾಫ್. ಓ ಹೆನ್ರಿ, ಸಾಮರಸೆಟ್ ಮಾಮ್, ಪ್ರೇಮಚಂದ, ಶರಚ್ಚಂದ್ರ ಚಟರ್ಜಿ, ಮಹಾದೇವಿ ವರ್ಮಾ, ಲಿಯೋ ಟಾಲ್ಸ್ಟಾಯ್, ಮದೇವ ಸಿಂಹ, ತಸ್ಲಿಮ್ ಮತ್ತು ಖಾಜಾ ಅಹಮದ್ ಅಬ್ಬಾಸ್ಹೀಗೆ ವಿಶ್ವದ ಹಲವು ದೇಶಗಳ, ಭಾಷೆಗಳ ವಿವಿಧ ಕಾಲಘಟ್ಟಗಳ, ವಿಷಯ ವಸ್ತುಗಳ ಲೇಖಕರ ಕಥೆಗಳನ್ನು ಅಷ್ಟೇ ಭಿನ್ನ ಸಾಮಾಜಿಕ, ಭಾಷಿಕ ವೃತ್ತಿಯ ಭಿನ್ನತೆಯ ಅನುವಾದಕರಿಂದ ಅನುವಾದಿಸಲ್ಪಟ್ಟಿವೆ. ಒಬ್ಬ ಬರಹಗಾರ ತನ್ನ ಜೀವಮಾನದುದ್ದಕ್ಕೂ ನೂರು ಕೃತಿಗಳನ್ನು ಬರೆದರೂ ಆತ ಮತ್ತೆ ಮತ್ತೆ ಒಂದು ವಿಷಯವನ್ನು ಕುರಿತು ಬರೆಯುತ್ತಾನೆ. ಹಾಗೆಯೇ ವಿಶ್ವದ ಅನೇಕ ಕಥೆಗಾರರು ಯಾವುದೇ ಕಾಲ, ದೇಶಗಳ ಅಂತರದಲ್ಲಿ ಕುಳಿತು ಬರೆದಿದ್ದರೂ ಕೂಡಾ ಬರಹಕ್ಕೊಳಪಡಿಸಿದ ಅಥವಾ ಬರಹದ ಮೂಲಕ ಬಗೆ ಹರಿಸಲು ಯತ್ನಿಸಿದ ಸಮಸ್ಯೆಯೊಂದೆ ಎನ್ನಲು ಈ ಸಂಕಲನ ಉತ್ತಮ ಸಾಕ್ಷಿಯಾಗಿದೆ.
©2024 Book Brahma Private Limited.