ಖ್ಯಾತ ಲೇಖಕ ಡಾ. ಆರ್. ಕೆ. ನಾರಾಯಣ್ ಅವರ ಆಂಗ್ಲ ಕೃತಿ-ಮಾಲ್ಗುಡಿ ಡೇಸ್. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಹೆಚ್. ರಾಮಚಂದ್ರಸ್ವಾಮಿ. ಮಾಲ್ಗುಡಿ ಎಂಬುದು ಮೂಲ ಲೇಖಕರ ಕಾಲ್ಪನಿಕ ಗ್ರಾಮ. ಅದರ ವರ್ಣನೆ, ಬಾಲ್ಯ ಕಳೆದ ದಿನಗಳ ವೈಭವ ಎಲ್ಲವನ್ನೂ ವರ್ಣನಾತೀತವಾಗಿ ವಿವರಿಸಿದ್ದಾರೆ. ಮೂಲ ಕೃತಿಯು ಇಂತಹ 32 ಕಥೆಗಳನ್ನು ಒಳಗೊಂಡಿದೆ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು, ಕಳ್ಳಕೊರಮರು-ಎಲ್ಲ ರೀತಿಯ ಪಾತ್ರಗಳೂ ಮೂರ್ತೀಭವಿಸಿವೆ. ಕೃತಿಯ ಅನುವಾದ ಕಲೆಯು ಪರಿಣಾಮಕಾರಿಯಾಗಿದೆ.
©2024 Book Brahma Private Limited.