’ಮಲೆಯಾಳದ ಮಹಿಳಾ ಕಥನ’ ಹತ್ತು ಕಥೆಗಾರ್ತಿಯರ ಹದಿನಾಲ್ಕು ಕಥೆಗಳನ್ನು ಒಳಗೊಂಡಿದೆ.
ಕಥೆಗಳ ಕನ್ನಡ ಅನುವಾದ, ಪರಿಚಯ, ಪ್ರಾಸ್ತಾವಿಕ, ಕಥೆ, ಸಂದರ್ಶನಗಳನ್ನು ನಿರೂಪಿಸಿ ಪುಸ್ತಕ ರೂಪಕ್ಕೆ ತಂದವರು ಲೇಖಕಿ, ಅನುವಾದಕಿಯಾದ ಪಾರ್ವತಿ ಜಿ. ಐತಾಳ್.
ಮಲಯಾಳದ ಸಾಹಿತ್ಯ ಕಥನವನ್ನು ಪರಿಚಯಿಸುವ ನಿಟ್ಟಿನಲ್ಲಿ ಲೇಖಕಿ ಅನೇಕ ಅಪರೂಪದ ಕಥಾನಕ ಬರಹಗಳನ್ನು ನೀಡಿದ್ದಾರೆ. ಮಲೆಯಾಳದ ಲೇಖಕಿ ಮಾಧವಿ ಕುಟ್ಟಿ (ಕಮಲಾದಾಸ್) ಅವರ ಕತೆಗಳನ್ನು ಕನ್ನಡದಲ್ಲಿ ಮುಖವಿಲ್ಲದ ನಾವಿಕ, ಸೋನಾಗಚ್ಚಿ, ಕೊನೆಯ ಅತಿಥಿ, ಹಕ್ಕಿಯ ವಾಸನೆ, ಎಂಬ ಶೀರ್ಷಿಕೆಯನ್ನಿಟ್ಟು ಬರೆದಿದ್ದಾರೆ.
ಗ್ರೇಸಿಯ ಪಂಚಾಲಿ ಮತ್ತು ಒರೋತ ಮತ್ತು ದೆವ್ವಗಳು, ಆಷಿತರ ಅಪೂರ್ಣ ವಿರಾಮಗಳು , ಚಂದ್ರಮತಿಯ ಕವಿತೆಯ ಕಥೆ, ಸಿ.ಎಸ್. ಚಂದ್ರಿಕಾ ಅವರ ಬೆಳದಿಂಗಳು ಮತ್ತು ಹಾವುಗಳು, ಸಾರಾ ಜೋಸೆಫ್ ಅವರ ಪ್ರಕಾಶಿನಿಯ ಮಕ್ಕಳು, ಗೀತಾ ಹಿರಣ್ಯನ್ ಅವರ ಅಸಂಘಟಿತೆ, ಅಗ್ನಿ, ಸ್ವಪ್ನದ ಎಳೆಗಳು, ಹೀಗೆ ಹಲವಾರು ಕಥಾನಕಗಳನ್ನು ಪ್ರಾಸ್ತಾವಿಕ ಹಾಗೂ ಸಂದರ್ಶನಗಳ ಜೊತೆ ಪ್ರಕಟಿಸಿದ್ದಾರೆ.
ಹೊಸತು-2005
ಹತ್ತು ಜನ ಮಲಯಾಳ ಲೇಖಕಿಯರ ಕತೆಗಳ ಅನುವಾದಿತ | ಹಳೆಕು ಈ ಪುಸ್ತಕ ವಿಭಿನ್ನವಾಗಿದೆ. ಕತೆಗೆ ಹಿನ್ನೆಲೆಯಾಗಿ ಕಥೆಗಾರ್ತಿಯರ ಪರಿಚಯವನ್ನಷ್ಟೇ ಅಲ್ಲದೆ ಅವರ ಸಂದರ್ಶನಗಳನ್ನೂ ಕೊಟ್ಟಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಈ ಮೂಲಕ ಮಲಯಾಳದ ಮಹಿಳಾ ಸಾಹಿತ್ಯದ ಸ್ವರೂಪ ಮತ್ತು ಲೇಖಕಿಯರ ಸ್ವತಂತ್ರ ಚಿಂತನೆಗಳು ಅರಿವಿಗೆ ಬರುತ್ತವೆ. ಕನ್ನಡದ ಸಂದರ್ಭದಲ್ಲೂ ಈ ಸಂಗತಿಗಳು ಹೆಚ್ಚು ಪ್ರಸ್ತುತವಾಗಿವೆ. ಮಾಧವಿ ಕುಟ್ಟಿ (ಕಮಲಾ ದಾಸ್) ಅಂತಹ ಹಿರಿಯ ಲೇಖಕಿಯರಿಂದ ಹಿಡಿದು ಸಿತಾರಾ ಅಂತಹ ಯುವ ಲೇಖಕಿಯ ತನಕ ಇಲ್ಲಿಯ ಕತೆಗಳ ಹರವು ಇದೆ. ಕತೆಗಳು ಸಹ ಸಾಕಷ್ಟು ವೈವಿಧ್ಯತೆಯನ್ನು ಹೊಂದಿದ್ದು, ಏಕತಾನತೆ ಅನಿಸುವುದಿಲ್ಲ. ಪಾರ್ವತಿ ಜಿ. ಐತಾಳ್ ಅವರ ಅನುವಾದ ಸಹ ಒಂದು ಉತ್ತಮ ಪ್ರಯತ್ನ.
©2024 Book Brahma Private Limited.