1881 – 1936 ರ ನಡುವಿನಲ್ಲಿ ಬದುಕಿದ್ದ ಲುಷನ್ ಚೀನಾದ ಅತ್ಯಂತ ಪ್ರಭಾವಿ ವ್ಯಕ್ತಿ, ಚಿಂತಕ, ಕ್ರಾಂತಿಕಾರಿ. ಲುಷನ್ ಚೀನಾ ಸಂಸ್ಕೃತಿಗೆ ತನ್ನ ಸಾಹಿತ್ಯವನ್ನು ಪರಿಚಯಿಸಿದವನು.
ದುಗುಡ, ಒಂಟಿತನ, ಹತಾಶೆ, ಇತ್ಯಾದಿ ಸಂದರ್ಭಗಳಲ್ಲಿ ತನ್ನ ಬದುಕಿನ ಅನುಭವದ ಕಣಗಳನ್ನು , ಭೇಟಿಯಾಗುತ್ತಿದ್ದ ವ್ಯಕ್ತಿಗಳನ್ನು, ಕತೆಯಾಗಿಸುವ ಪ್ರಯತ್ನದಲ್ಲಿ ಲುಷನ್ ತನ್ನನ್ನು ತಾನು ತೊಡಗಿಸಿಕೊಂಡ.
ಲುಷನ್ ಕತೆಗಳಲ್ಲಿ ಕಾಣುವ ಸರಳತೆ, ವಾಸ್ತವತೆ, ಆಪ್ತತೆ, ಪ್ರಾಮಾಣಿಕತೆಗಳು ವೈಶಿಷ್ಟಗಳಾಗಿವೆ. ಇವನ ಹತ್ತು ಚೀನಿ ಕಥೆಗಳಲ್ಲಿ ಕಾಣಬಹುದು.
ವಿಚ್ಛೇದನ, ಹುಚ್ಚನ ದಿನಚರಿ, ಮೆಡಿಸನ್, ನಾಳೆ, ಒಂದು ಘಟನೆ, ಚಹದ ಬಟ್ಟಲಲ್ಲಿ ಬಿರುಗಾಳಿ,ಸುಖೀ ಸಂಸಾರ, ನನ್ನ ಹಳೆಮನೆ, ಆಹ್ ಕ್ಯೂನ್ ನೈಜ ಕತೆ, ಚಂದ್ರನೆಡೆಗೆ ಕತೆಗಳು ಡಾ. ವಿಜಯಾ ಸುಬ್ಬರಾಜ್ ಅವರ ಕನ್ನಡ ಅನುವಾದದಲ್ಲಿ ಮೂಡಿಬಂದಿದೆ.
©2024 Book Brahma Private Limited.