ಭಾರತೀಯ ಭಾಷೆಗಳಲ್ಲಿಯೇ ಇಂಥ ಆಯಾಮದ ಕಥಾಸಾಹಿತ್ಯದ ಸಮಗ್ರ ನೋಟವನ್ನು ನೀಡ ಬಲ್ಲಂತಹ ಇನ್ನೊಂದು ಗ್ರಂಥ ಬಂದಿಲ್ಲವೆಂಬ ಹೆಗ್ಗಳಿಕೆಗೆ ಈ ಕೃತಿಯೂ ಪಾತ್ರವಾಗಿದೆ. ಶ್ರೀಕಮಲೇಶ್ವರ್ ಅವರು ತಮ್ಮ ಮಿತ್ರರ ಸಹಾಯದೊಂದಿಗೆ ಈ ಕೃತಿಯನ್ನು ಸಂಪಾದಿಸಿದರು. ಆರ್. ಪಿ. ಹೆಗಡೆಯವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಸಂಪುಟವು ಮೂಲಕೃತಿಯ ಆರು ಖಂಡಗಳನ್ನು ಹಾಗೂ ಇವುಗಳಲ್ಲಿ ಕ್ರಮವಾಗಿ ನೈತಿಕ ಕಥೆಗಳು, ಕಥಾಸರಿತ್ಸಾಗರದ ಕಥೆಗಳು, ಬುದ್ಧನ ಮತ್ತು ಜಾತಕದ ಕಥೆಗಳು, ಜೈನಾಗಮದ ಕಥೆಗಳು, ಪಂಚತಂತ್ರ ಹಾಗೂ ಹಿತೋಪದೇಶದ ಕಥೆಗಳು ಮತ್ತು ಉಪನಿಷತ್ತಿನ ಕಥೆಗಳನ್ನು ಈ ಸಂಪುಟವು ಒಳಗೊಂಡಿದೆ.
©2024 Book Brahma Private Limited.