ಹಿರಿಯ ಲೇಖಕ -ಪತ್ರಕರ್ತ ಜಿ. ಎನ್. ರಂಗನಾಥ ರಾವ್ ಅವರ ‘ಕಾಫ್ಕಾ ಕಥೆಗಳು’ ಅನುವಾದಿತ ಕೃತಿ. ಕೃತಿಗೆ ಬೆನ್ನುಡಿ ಬರೆದಿರುವ ಎಸ್. ದಿವಾಕರ್ ಅವರು, ಕಾಫ್ಕಾನ ಕೃತಿಗಳನ್ನು ಅನುವಾದಿಸುವುದು ಸುಲಭದ ಕೆಲಸವಲ್ಲ. ಕಾವ್ಯದಲ್ಲಿ ಹೇಗೋ ಹಾಗೆ ಅವನು ಶಬ್ಧಗಳನ್ನು ಅವುಗಳ ಸಮಗ್ರಾರ್ಥದಲ್ಲಿ ಬಳಸಿರುವುದರಿಂದ, ಅದನ್ನು ಬೇರೊಂದು ಭಾಷೆಯಲ್ಲಿ ಅಷ್ಟೇ ಖಚಿತವಾಗಿ ಹಿಡಿಯುವುದೂ ಒಂದು ಸವಾಲು. ಜಿ.ಎನ್. ರಂಗನಾಥ ರಾವ್ ಅವರ ಇಲ್ಲಿನ ಕತೆಗಳನ್ನು ಓದಿದರೆ, ಕಾಫ್ಕಾನ ತಿರುಳನ್ನು ಗ್ರಹಿಸಬಲ್ಲ ಅವರ ಪ್ರತಿಭೆಯ ಬಗೆಗೆ ಆಶ್ಚರ್ಯವುಂಟಾಗುತ್ತದೆ. ಇವು ಕನ್ನಡದ್ದೇ ಆದ ಕತೆಗಳ ಸಂಗ್ರಹವೋ ಎನ್ನುವಷ್ಟು ಮಟ್ಟಿಗೆ ಅವರ ಅನುವಾದಗಳು ಸಹಜವಾಗಿವೆ. ಮೂಲಕ್ಕೆ ಎಲ್ಲಿಯೂ ಕುಂದಾಗದಂತೆ, ಕಾಫ್ಕಾನ ವಿಚಾರ ಪ್ರಣಾಲಿಯ ಜೊತೆಯಲ್ಲೇ ಸಾಗಿ, ಭಾಷೆಗಳು ಬೇರೆಬೇರೆಯಾದರೂ ಕಾಫ್ಕಾ ಮತ್ತು ಅನುವಾದಕ ಇವರಿಬ್ಬರ ಮನೋಧರ್ಮಗಳು ಒಂದೇ ಎನ್ನಿಸುವಂತೆ ಅವರು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ' ಎಂದಿದ್ದಾರೆ.
©2024 Book Brahma Private Limited.