ಕವಿ ಚಂದ್ರಶೇಖರ ಆಲೂರು ಅವರ ’ಹೀಗೊಂದು ದಾಂಪತ್ಯಗೀತೆ’ ಕೃತಿಯು ಆಂಟನ್ ಚೆಕಾವ್ ನ ಕಿರು ಕಾದಂಬರಿ ಮತ್ತು ಕೆಲಕತೆಗಳಾಗಿದೆ. ‘ಈ ಕೃತಿಯಲ್ಲಿ ಅನುವಾದದ ವ್ಯಾಕರಣವನ್ನು ಅಷ್ಟಾಗಿ ಪಾಲಿಸದೆ, ಮೂಲಕೃತಿಯ ಹೃದಯದ ಮಿಡಿತವನ್ನು ಹಿಡಿದಿರಲು ಯತ್ನಿಸಿದ ಫಲ ಇಲ್ಲಿದೆ. ಚೆಕಾವ್ ನ ಕೆಲವು ಕತೆಗಳು ಮತ್ತು ’ದ ತ್ರೀ ಇಯರ್ಸ್’ ಎಂಬ ಕಿರು ಕಾದಂಬರಿಯನ್ನು ಈ ಕೃತಿಯು ಒಳಗೊಂಡಿದೆ. 21ನೇ ಶತಮಾನದ ಭಾರತಕ್ಕೆ, ಕರ್ನಾಟಕಕ್ಕೆ ಇಂದೂ ಪ್ರಸ್ತುತ ಎನಿಸುವ ಚೆಕಾವ್ ನ ಕತೆಗಳು ನನ್ನಲ್ಲಿ ಸದಾ ಕುತೂಹಲಭರಿತ ಅಕ್ಕರೆಯನ್ನು ಹುಟ್ಟಿಸಿವೆ. ’ದ ತ್ರೀ ಇಯರ್ಸ್’ ಆಗಲಿ, ಆತನ ಇತರ ಕತೆಗಳಾಗಲಿ ಕನ್ನಡದ ಅತ್ಯತ್ತಮ ಕತೆಗಾರನೊಬ್ಬ ಬರೆದ ಕತೆಗಳಂತೆಯೇ ಕಾಣುತ್ತವೆ. ಈ ಪ್ರಸ್ತುತತೆಯೇ ಈ ಕೃತಿಯ ಹುಟ್ಟಿಗೆ ಕಾರಣವಾಗಿದೆ’ ಎಂದು ಅನುವಾದಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.