‘ಹಾರಿಕೊಂಡು ಹೋದವನು’ ಎಸ್. ದಿವಾಕರ್ ಅವರು ಅನುವಾದಿಸಿರುವ ಕತಾಸಂಕಲನ. ಹಲವು ದೇಶಗಳ ಅತಿಸಣ್ಣ ಕತೆಗಳು ಇಲ್ಲಿ ಸಂಕಲನಗೊಂಡಿವೆ. ‘ದಿವಾಕರ್ ವಿಶ್ವಸಾಹಿತ್ಯಕ್ಕೆ ಬೆಳಕಿಂಡಿಯಂತೆ ಇರುವವರು. ಒಂದರ್ಥದಲ್ಲಿ ವರ್ಲ್ಡ್ ಲಿಟರೇಚರ್‌ನ ವಿಕಿಪೀಡಿಯಾ. ಹೀಗಾಗಿ ಅವರ ಹುಡುಕಾಟ, ಸಂಪಾದನೆ ಕುತೂಹಲ ಹುಟ್ಟಿಸುವಂತೆ ಇರುತ್ತವೆ ಮತ್ತು ಅದಕ್ಕೋಸ್ಕರ ಕಾಯುವಂತೆ ಮಾಡುತ್ತವೆ’ ಎನ್ನುತ್ತಾರೆ ಲೇಖಕ ಜೋಗಿ.
ಈ ಕೃತಿಗೆ ಮುನ್ನುಡಿ ಬರೆದಿರುವ ಅವರು, ‘ನಾವು ನಿರೀಕ್ಷಿಸಬಹುದಾದ ಒಂದೇ ಒಂದು ಕತೆಯೂ ಈ ಸಂಕಲನದಲ್ಲಿಲ್ಲ. ನಾವು ಓದಿರಬಹುದಾದಂಥ ಕತೆಯೂ ನಮಗೆ ಸಿಗುವುದಿಲ್ಲ. ಹೀಗೇ ನಡೆಯುತ್ತದೆ ಎಂದು ಊಹಿಸಬಹುದಾದ ಸನ್ನಿವೇಶಗಳನ್ನು ಒಳಗೊಂಡಿರುವ ಕತೆಯೂ ಇಲ್ಲಿ ನಮಗೆ ದೊರೆಯುವುದಿಲ್ಲ. ಕತೆಯ ಮಾತು ಬಿಡಿ, ಒಂದೊಂದು ವಾಕ್ಯವೂ ನಮಗೆ ಅಪರಿಚಿತ. ಹೀಗಾಗಿಯೇ ಅವು ನಮ್ಮ ಓದುವ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಹೋಗುತ್ತವೆ’ ಎಂದಿದ್ದಾರೆ. ಇಲ್ಲಿಯ ಕತೆಗಳ ಕುರಿತು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ಕೆ.ವಿ ಅಕ್ಷರ ಅವರು ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
©2024 Book Brahma Private Limited.