ಷಿಗೆ ನಯೋಯ, ಅಕುಟಗಾವಾ ರೈಯು ನೊಸುಕೆ, ಕವಾಬಾಟ ಯಸುನಾರಿ, ಹೆಸೆಲಿಯಾಂಗ್ ಮೊದಲಾದ ಮತ್ತು ಅಜ್ಞಾತ ಕರ್ತೃವೊಬ್ಬರ ಎಂಟು ಕಥೆಗಳನ್ನು ಗಾಂಧೀವಾದಿ ನೀಲತ್ತಹಳ್ಳಿ ಕಸ್ತೂರಿ ಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರಳವಾದ ರೀತಿ, ಮನೋಜ್ಞವಾದ ಸನ್ನಿವೇಶಗಳು, ಸಂಸಾರದಲ್ಲಿ ಬರುವ ಅಪನಂಬಿಕೆಗಳು, ಸ್ತ್ರೀಯ ಮನೋ ವಿಶ್ಲೇಷಣೆಯ ಪಾಂಡಿತ್ಯ, ವಿಧವೆಯೊಬ್ಬಳು ಸೇವಕನನ್ನು ಪ್ರೇಮಿಸಿ, ಗೌರವವನ್ನು ಕಳೆದುಕೊಂಡು ನೇಣುಹಾಕಿಕೊಡ ಪ್ರಕರಣ ಇಂತಹ ಪ್ರಮುಖ ಸಂಗತಿಗಳನ್ನು ನೀಲತ್ತಹಳ್ಳಿ ಕಸ್ತೂರಿ ಯವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.