ಬೇನೆಗಳ ದುಭಾಷಿ

Author : ಗೀತಾ ಶೆಣೈ

Pages 169

₹ 100.00




Year of Publication: 2005
Published by: ಸಪ್ನಾ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು -560009
Phone: 08022266088

Synopsys

ಪ್ರಸಿದ್ಧ ಇಂಗ್ಲಿಷ್ ಲೇಖಕಿ ಜುಂಪಾ ಲಾಹಿರಿ ಅವರ ‘ಇಂಟರ್‌ಪ್ರೀಟರ್ ಆಫ್ ಮ್ಯಾಲಡೀಸ್’ ಕಥಾಸಂಕಲನದ ಕನ್ನಡ ಅನುವಾದವಿದು. ಭಾರತೀಯ ಮೂಲದ ಜುಂಪಾ ಲಾಹಿರಿ ಲಂಡನ್‍ನಲ್ಲಿ ಹುಟ್ಟಿ ಅಮೇರಿಕಾದ ರೋಡ್ ದ್ವೀಪದಲ್ಲಿ ಬೆಳೆದವರು. ಈಗ ನ್ಯೂಯರ್ಕ್ ನಗರದಲ್ಲಿ ವಾಸವಾಗಿದ್ದಾರೆ. ಅನಿವಾಸಿ ಭಾರತೀಯರಾಗಿರುವ ಇವರ ಹೆತ್ತವರು ಕಲ್ಕತ್ತಾದವರು. ಮಾತೃಭಾಷೆ ಬಂಗಾಲಿ. ತಮ್ಮ ಏಳನೆಯ ವಯಸ್ಸಿನಲ್ಲಿ ಬರೆವಣಿಗೆಯನ್ನು ಪ್ರಾರಂಭಿಸಿದ ಜುಂಪಾ ಲಾಹಿರಿಯ ಮೊದಲ ಕಥಾಸಂಕಲನ ‘ಇಂಟರ್‌ಪ್ರೀಟರ್ ಆಫ್ ಮ್ಯಾಲಡೀಸ್’.

ಇದು ಪ್ರಕಟವಾಗಿರುವುದು 1999ರಲ್ಲಿ. 2000ನೇ ಸಾಲಿನ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಈ ಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ಅನಿವಾಸಿ ಭಾರತೀಯರ ನೋವು, ಅನಾಥಪ್ರಜ್ಞೆ ಹಾಗೂ ಬದುಕಿನ ಗತಿಯನ್ನು ಸಾಹಿತ್ಯದಲ್ಲಿ ಮೂಡಿಸುತ್ತಿರುವ ಹೊಸದನಿ ಎಂದು ಗುರುತಿಸಿರುವ ಈ ಲೇಖಕಿಯ ‘ನಿಜ ಕಾವಲುಗಾರ’, ‘ಶ್ರೀಮತಿ ಸೇನರಲ್ಲಿ’, ‘ಬೀಬಿ ಹಲ್ದಾರಳ ಚಿಕಿತ್ಸೆ’ ಹಾಗೂ ‘ಮೂರನೆಯ ಮತ್ತು ಕೊನೆಯ ಖಂಡ’ ಕಥೆಗಳು ಸ್ತ್ರೀ ಕೇಂದ್ರಿತವಾಗಿ ಗಮನವನ್ನು ಸೆಳೆದಿವೆ. ‘ಬೇನೆಗಳ ದುಭಾಷಿ’ ‘ಒಂದು ಹಂಗಾಮಿ ವಿಚಾರ’, ‘ಮಿಸ್ಟರ್ ಪಿರ್‌ಜಾದ ಊಟಕ್ಕೆಂದು ಬಂದಾಗ’ ಕತೆಗಳು ಕೂಡ ಅಂತಾರಾಷ್ಟ್ರೀಯ ಮನ್ನಣೆ ಪಡೆದು ಬಹುಚರ್ಚಿತವಾಗಿವೆ.

 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books