ಝೆನ್‌-ಕತೆಗಳು-ಕವಿತೆಗಳು-ಒಗಟುಗಳು

Author : ಜಿ.ಎನ್. ರಂಗನಾಥ ರಾವ್

Pages 184

₹ 180.00




Year of Publication: 2010
Published by: ಅಂಕಿತ ಪುಸ್ತಕ
Address: #53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004

Synopsys

ಹೂವಿನ ಪರಿಮಳದಷ್ಟೇ ಮುಕ್ತವಾದ, ಆದರೆ ಅನಿರ್ವಚನೀಯವಾದ ಝೆನ್‌, ಶತಮಾನಗಳಷ್ಟು ಹಿಂದೆಯೇ ಭಾರತದಿಂದ ವಲಸೆ ಹೋಗಿ ಚೀನ ಮತ್ತು ಜಪಾನ್‌ ದೇಶಗಳಲ್ಲಿ ನೆಲೆಕಂಡುಕೊಂಡ ಬೌದ್ಧಧರ್ಮದ ಹಲವು ಶಾಖೆಗಳಲ್ಲಿ ಪ್ರಮುಖವಾದದ್ದು. ಝೆನ್‌, ಸಂಸ್ಕೃತ ’ಧ್ಯಾನ’ದ ಅಪ್ರಭ್ರಂಶ. ಚೀನಾದಲ್ಲಿ  ’ಚಾನ್‌’ ಆಗಿ ಜಪಾನಿನಲ್ಲಿ ಝೆನ್‌ ಆಗಿ ಭದ್ರ ನೆಲೆಯೂರಿತು. ಈಗ ಜಪಾನಿನ ಒಂದು ಪ್ರಮುಖ ಧರ್ಮವಾದ ’ಝೆನ್‌’ ಬೋಧಿಸುವುದು ಆತ್ಮಜ್ಞಾನ ಅಥವಾ ವ್ಯಕ್ತಿಯ ಸ್ವ-ಪ್ರಜ್ಞೆಯ ಜ್ಞಾನೋದಯ.
ಈ ಗುರಿ ಸಾಧನೆಗೆ ಮಾಧ್ಯಮವಾಗಿ ಗುರುಮುಖೇನ ಒದಗಿ ಬಂದವು; ಕಥೆ, ಕವಿತೆ, ಒಗಟು, ಸಂವಾದ ಝೆನ್‌ ಕಥೆ, ಕವಿತೆ, ಮುಂಡಿಗೆಗಳು. ಅಗಮ್ಯವಾದ ಸ್ವರ್ಗಕ್ಕಿಂತ ಮರ್ತ್ಯದ ಮುಖಾಮುಖಿಯಲ್ಲೆ ’ಮಹಾಶೂನ್ಯ’ದ ಅನ್ವೇಷಣೆಯಲ್ಲಿ ತೊಡಗುತ್ತವೆ. ಈ ಪ್ರಕ್ರಿಯೆಯಲ್ಲೇ ಬದುಕಿನ ಅನಂತತೆ ಮತ್ತು ನಶ್ವರದವರೆಗಿನ ಸಕಲವೂ ಪ್ರತ್ಯಕ್ಷವಾಗುತ್ತ, ನಮ್ಮ ಪ್ರಜ್ಞೆಗೆ ತಾಕುವುದರಲ್ಲಿ ’ಆತ್ಮಜ್ಞಾನ’ ತಟ್ಟನೆ ಅಭಿವ್ಯಕ್ತಿಗೊಳ್ಳುತ್ವೆ. ಇವು ಕುಶಾಲಿನ ಕತೆಗಳೂ ಹೌದು, ಅಂತರಂಗಕ್ಕೆ ತಾಕುವ ಗಂಭೀರ ಕತೆಗಳೂ ಹೌದು.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books