ಹಿರಿಯರಿವರು

Author : ಪಾದೇಕಲ್ಲು ವಿಷ್ಣು ಭಟ್ಟ

Pages 248

₹ 180.00




Year of Publication: 2021
Published by: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ
Address:  ಇಡ್ಕಿದು, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ

Synopsys

‘ಹಿರಿಯರಿವರು’ ಕೃತಿಯು ಪಾದೇಕಲ್ಲು ವಿಷ್ಣು ಭಟ್ಟ ಅವರ ವ್ಯಕ್ತಿ ಚಿತ್ರಣಗಳ ಸಂಕಲನ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಸ್ತಾರವಾಗಿ ಓದಿಕೊಂಡವರು, ಸತತವಾಗಿ ಪರಿಶ್ರಮಪಟ್ಟವರು. ಹೆಚ್ಚಿನವರು ತಮ್ಮ ಕ್ಷೇತ್ರಗಳಲ್ಲಿ ಮಾರ್ಗದರ್ಶಕ / ಸಹೃದಯರೆಂದು ಪರಿಗಣಿಸಲ್ಪಟ್ಟವರು. ಕೆಲವರು ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿದವರು. ಈ ಎಲ್ಲ ಹಿರಿಯರ ಬಗ್ಗೆ ಈಗಾಗಲೇ ಬೇರೆ ಬೇರೆಡೆ ಲೇಖನಗಳು, ಪುಸ್ತಕಗಳು ಬಂದಿದ್ದರೂ, ಈ ಕೃತಿಯಲ್ಲಿ ಲೇಖಕರು ತಮ್ಮ ಅನುಭವದಿಂದ ಆ ಹಿರಿಯರ ಬಗೆಗೆ ಕೆಲವು ಆಪ್ತವೆನಿಸುವಂತಹ ವಿಶಿಷ್ಟ ವಿಷಯಗಳನ್ನು ಬರೆದಿದ್ದಾರೆ. ಇಲ್ಲಿ ಚಿತ್ರಿಸಲ್ಪಟ್ಟ ಹಿರಿಯರ ಪೈಕಿ ಅವಳ್ಳಿ ಅನಂತಕೃಷ್ಣ ಶರ್ಮ, ವೈ. ನಾಗೇಶ ಶಾಸ್ತ್ರೀ, ಎನ್. ಎಸ್. ಕಿಲ್ಲೆ, ಪ್ರೊ. ಎಂ. ಆರ್. ಶಾಸ್ತ್ರೀ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕರ ಸಂಪರ್ಕಕ್ಕೆ ಬಂದವರೆ ಆಗಿರುವುದು ವಿಶೇಷ. ಇಲ್ಲಿ ಒಟ್ಟುಗೂಡಿದ ಲೇಖನಗಳು ವಿವಿಧ ಸನ್ಮಾನ ಗ್ರಂಥಗಳಲ್ಲಿ, ಸರಣಿ ಸಂಪುಟಗಳಲ್ಲಿ, ಪತ್ರಿಕೆಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಕಟಗೊಂಡ ಲೇಖನಗಳಾಗಿದ್ದು, ಶೈಲಿ, ವಿಷಯ ನಿರೂಪಣೆ ಬೇರೆ ಬೇರೆಯೇ ಆಗಿದೆ’ ಎಂದು ಲೇಖಕರು ಮಾಹಿತಿ ನೀಡಿದ್ದಾರೆ. 

About the Author

ಪಾದೇಕಲ್ಲು ವಿಷ್ಣು ಭಟ್ಟ
(06 February 1956)

ಪಾದೇಕಲ್ಲು ವಿಷ್ಣು ಭಟ್ಟ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 06-02-1956 ರಂದು ಜನಿಸಿದರು. ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ, ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮಸ್ಥಾನದಲ್ಲಿ ಎಂ.ಎ ಪದವಿ ಪಡೆದರು. ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ನಂತರ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ...

READ MORE

Related Books