ಹಳ್ಳಿಯ ಹಣತೆಗಳು

Author : ಬಾರಿಯಂಡ ಜೋಯಪ್ಪ

Pages 120

₹ 150.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಅದಿಚುಂಚನಗಿರಿ ವಿಶ್ವವಿದ್ಯಾಲಯ, ಬಿ.ಜಿ. ನಗರ, ನಾಗಮಂಗಲ ತಾಲೂಕು, ಮಂಡ್ಯ-571448.

Synopsys

ಹಳ್ಳಿಯ ಹಣತೆಗಳು ಎಂಬುದು ಲೇಖಕ ಬಾರಿಯಂಡ ಜೋಯಪ್ಪ ಅವರು ರಚಿಸಿದ್ದಾರೆ. ಒಕ್ಕಲಿಗ ಸಾಧಕರ ಕುರಿತಾಗಿರುವ ಈ ಕೃತಿಯಲ್ಲಿ ದಂತಕತೆಯಾದ ಸಣ್ಣಮನೆ ಮೋನಪ್ಪಗೌಡರು, ಉದಾರ ಯಲದಾಳು ದೇವಯ್ಯನವರು, ಕಾಡಿನದಿಟ್ಟೆ ಬಾರಿಯಂಡ ಅಚ್ಚಮ್ಮನವರು ಅವರ ಬಾಳಿನ ಕಥನಗಳನ್ನು ಈ ಕೃತಿಯು ಹೊಂದಿದೆ. ಕೃತಿಯ ಬೆನ್ನುಡಿಯಲ್ಲಿ, ಬಾರಿಯಂಡ ಜೋಯಪ್ಪನವರು ಈಗ 'ಹಳ್ಳಿಯ ಹಣತೆಗಳು' ಎಂಬ ಕೃತಿಯನ್ನು ಸಾಹಿತ್ಯ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಬಾರಿಯಂಡ ಜೋಯಪ್ಪನವರು ಎಲೆಮರೆಯ ಕಾಯಿಯಂತಿರುವ ಮೂರು ಅದ್ಭುತ ಚೇತನಗಳನ್ನು ಸುಂದರ ಸರಳ ಶೈಲಿಯಲ್ಲಿ ನುಡಿಚಿತ್ರವನ್ನು ಕಣ್ಣಿಗೆ ಕಣ್ಣುವಂತೆ ಚಿತ್ರಿಸಿದ್ದಾರೆ. 'ದಂತಕತೆ'ಯಾದ ಸಣ್ಣಮನೆ ಮೋನಪ್ಪಗೌಡರು, “ಉದಾಲ' ಯಾಲದಾಳು ದೇವಯ್ಯನವರು ಮತ್ತು 'ಕಾಡಿನ ದಿಟ್ಟೆ' ಬಾಲಿಯಂಡ ಅಚ್ಚಮ್ಮನವರು ಎಂಬ ಶೀರ್ಷಿಕೆಯಡಿಯಲ್ಲಿ ತಾವು ಕಂಡು-ಕೇಳದ ವ್ಯಕ್ತಿಗಳನ್ನು ಕುರಿತು ಮನಮುಟ್ಟುವಂತೆ ನುಡಿತೋರಣ ಕಟ್ಟಿದ್ದಾರೆ. ಪ್ರಚಾರ ಬಯಸದ ತ್ಯಾಗಮಯಿ ಜೀವನ ನಡೆಸಿ ಜನಸಾಮಾನ್ಯರಿಗೆ ಅತಿ ಅಗತ್ಯವಾದ ಅನುಕೂಲ ಮಾಡಿಕೊಟ್ಟ ಈ ಮೂರು ವ್ಯಕ್ತಿಗಳ ಬದುಕು-ಬವಣೆಗಳು ಬೇರೆ ಬೇರೆಯಾಗಿದ್ದರೂ, ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ ಮೂವರು ಮಹನೀಯರ ಬದುಕನ್ನು 'ಹಳ್ಳಿಯ ಹಣತೆಗಳು' ಕೃತಿಯಲ್ಲಿ ಪರಿಚಯಿಸಿದ್ದು, ಲೇಖಕರು ಅಭಿನಂದನಾರ್ಹರು ಎಂದು ಪುಸ್ತಕದ ಬೆನ್ನುಡಿಯಲ್ಲಿ ಡಾ. ಶ್ರೀಧರ ಹೆಗಡೆ ಅವರು ಬರೆದಿದ್ದಾರೆ. 

About the Author

ಬಾರಿಯಂಡ ಜೋಯಪ್ಪ
(02 August 1957)

ಬಾರಿಯಂಡ ಜೋಯಪ್ಪನವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾಟಿಬೆಟ್ಟದವರು.  ತಂದೆ ರಾಮಪ್ಪ, ತಾಯಿ ಅಚ್ಚಮ್ಮ ಸುಳುಗೋಡು, ಮೊನ್ನಪ್ಪಸಂತೆ, ಬಾಳೆಲೆ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಎಂ.ಎ., ಬಿ.ಇ.ಡಿ., ಪದವೀಧರರು. ಮಾದೆನಾಡಿನ ಮಲೆ ಮಹೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮುಖ್ಯೋಪಾಧ್ಯಾಯ ಮತ್ತು ಪ್ರಾಂಶುಪಾಲರಾಗಿ, ನಿವೃತ್ತರು.  ಕೃತಿಗಳು: ಯಾರ ಬೇಟೆ ಮತ್ತು ಇತರ ಪ್ರಸಂಗಗಳು, ಸಾಧಕರ ಹೆಜ್ಜೆಗಳು, ಕಾಟಿಬೆಟ್ಟದ ಕಥೆಗಳು, ಹಳ್ಳಿಯ ಹಣತೆ,ಅರೆಭಾಷೆಯಲ್ಲಿ ಛಾಂಪಾ, ತೋರಣ. ಪ್ರಶಸ್ತಿ- ಪುರಸ್ಕಾರಗಳು:  2008ರಲ್ಲಿ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, 2013ರಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿವೆ.  ...

READ MORE

Related Books