ಬಾರಿಯಂಡ ಜೋಯಪ್ಪನವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾಟಿಬೆಟ್ಟದವರು. ತಂದೆ ರಾಮಪ್ಪ, ತಾಯಿ ಅಚ್ಚಮ್ಮ ಸುಳುಗೋಡು, ಮೊನ್ನಪ್ಪಸಂತೆ, ಬಾಳೆಲೆ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಎಂ.ಎ., ಬಿ.ಇ.ಡಿ., ಪದವೀಧರರು. ಮಾದೆನಾಡಿನ ಮಲೆ ಮಹೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮುಖ್ಯೋಪಾಧ್ಯಾಯ ಮತ್ತು ಪ್ರಾಂಶುಪಾಲರಾಗಿ, ನಿವೃತ್ತರು.
ಕೃತಿಗಳು: ಯಾರ ಬೇಟೆ ಮತ್ತು ಇತರ ಪ್ರಸಂಗಗಳು, ಸಾಧಕರ ಹೆಜ್ಜೆಗಳು, ಕಾಟಿಬೆಟ್ಟದ ಕಥೆಗಳು, ಹಳ್ಳಿಯ ಹಣತೆ,ಅರೆಭಾಷೆಯಲ್ಲಿ ಛಾಂಪಾ, ತೋರಣ.
ಪ್ರಶಸ್ತಿ- ಪುರಸ್ಕಾರಗಳು: 2008ರಲ್ಲಿ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, 2013ರಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿವೆ.